ಕಲಬುರಗಿ, ಆಗಸ್ಟ. 21: ಜಿಲ್ಲೆಯಲ್ಲಿ ನಾಳೆಯಿಂದ ಅಂದರೆ ದಿನಾಂಕ 22.08.2020 ರಿಂದ ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಮದ್ಯ ಮಾರಾಟ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿಗಳಾದ ಬಿ. ಶರತ್ ಅವರು ಆದೇಶ ಹೊರಡಿಸಿದ್ದಾರೆ.
ದಿನಾಂಕ 22.08.2020ರಂದು ಬೆಳಿಗ್ಗೆ 6.00 ಗಂಟೆಯಿAದ 23.08.2020ರ ವರೆಗೆ ಮದ್ಯ ಮಾರಾಟ ನಿಷೇಧಿಲಾಗಿದ್ದು, ಅದರಂತೆ ಆಗಸ್ಟ 26ರ ಬೆಳಿಗ್ಗೆ 6.00ಗಂಟೆಯಿAದ 27ರ ಬೆಳಿಗ್ಗೆ 6.00 ಗಂಟೆಯವರೆಗೆ, 30.8.2020ರಂದು ಬೆಳಿಗ್ಗೆ 6.00 ರಿಂದ 31 ಆಗಸ್ಟ ಬೆಳಿಗ್ಗೆ 6.00 ಗಂಟೆಯವರೆಗೆ ಮತ್ತು ಸೆಪ್ಟೆಂಬರ್ 1ರಂದು ಬೆಳಿಗ್ಗೆ 6.00ಗಂಟೆಯಿAದ ಸೆಪ್ಟಂಬರ್ 2ರ ಬೆಳಿಗ್ಗೆ 6.00 ರ ವರೆಗೆ ಮದ್ಯ ಮಾರಾಟ ಜಿಲ್ಲೆಯಾದ್ಯಂತ ನಿಷೇಧ ಮಾಡಿ ಆದೇಶ ಜಾರಿಮಾಡಲಾಗಿದೆ.