ಮಾಧ್ಯಮದವರ ಮೇಲೆ ಹಲ್ಲೆ: ಪತ್ರಕರ್ತರಿಂದ ಚಿಂಚೋಳಿಯಲ್ಲಿ ಪ್ರತಿಭಟನೆ

0
1035

ಚಿಂಚೋಳೀ, ಆಗಸ್ಟ. 13: ಬೆಂಗಳೂರಿನಲ್ಲಿ ಇತ್ತೀಚೆಗೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಚಿಂಚೋಳಿಯಲ್ಲಿAದು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿಂಚೋಳಿ ತಾಲೂಕ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ತಾಲೂಕ ತಹಸೀಲ್ದಾರರ ಮುಖಾಂತರ ಸಲ್ಲಿಸಲಾಯಿತು. ಶಿರಸ್ತೆದಾರ ವೆಂಕಟೇಶ ದುಗ್ಗನ್ ಮನವಿ ಪತ್ರವನ್ನು ಸ್ವೀಕರಿಸಿದರು.
ಬೆಂಗಳೂರ ನಗರದ ಡಿಜೆಹಳ್ಳಿ ಮತ್ತು ಕೆಜಿ. ಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆಯ ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಮತ್ತು ವಾಹಿನಿಗಳ ಕ್ಯಾಮರಾಮನ್‌ಗಳ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ಮಾಡಿದ್ದು ಮಾಧ್ಯಮದವರೆಂದು ಗೊತ್ತಿದ್ದರೂ, ಈ ಕೃತ್ಯವೆಸಗಿ, ಕ್ಯಾಮರಾ ಕಿತ್ತುಕೊಂಡು ಧ್ವಂಸ ಮಾಡಲಾಗಿದ ಘಟನೆ ಅತ್ಯಂತ ಖಂಡನೀಯವಾಗಿದೆ ಎಂದು ಮನವಿ ಪತ್ರದಲ್ಲಿ ಖಂಡಿಸಲಾಗಿದೆ.
ಪತ್ರಿಕಾ ಕ್ಷೇತ್ರದಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಒಂದು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಭಯದ ವಾತಾವರಣದಲ್ಲಿ ಇರುವ ವಾತಾವರಣದಲ್ಲಿರುವ ಪತ್ರಕರ್ತರಿಗೆ ರಕ್ಷಣೆಯಿಲ್ಲದಂತಾಗಿದೆ. ಗೂಂಡಾ ಸಂಸ್ಥೃತಿಗೆ ಪತ್ರಕರ್ತರು ಬಲಿಯಾಗುತ್ತಿದ್ದಾರೆ. ಸಮಾಜದಲ್ಲಿ ಆಗುತ್ತಿರುವ ಘಟನಾವಳಿಗಳ ಮೇಲೆ ಬೆಳಕು ಮೂಡಿಸುವ ದಿಶೆಯಲ್ಲಿ ವರದಿ ಮಾಡಲು ತೆರಳುವ ವರದಿಗಾರರ ಮೇಲೆಯೆ ಕಿಡಗೇಡಿಗಳು ಹಲ್ಲೆ ಮಾಡಿದ್ದು ಆಕ್ಷಮ್ಯ ಅಪರಾಧವಾಗಿದೆಯಲ್ಲದೇ ಇದು ಪ್ರಜ್ಞಾವಂತ ಸಮಾಜ ತಲೆತಗ್ಗಿಸುವಂತಾಗಿದೆ, ಸರಕಾರ ಎಚ್ಚೆತ್ತುಕೊಂಡು ಪತ್ರಕರ್ತರ ರಕ್ಷಣೆಗೆ ಮುಂದಾಗಬೇಕೆAದು ಸರಕಾರ ಸಂಘವು ಒತ್ತಾಯಿಸಿದೆ.
ಅಲ್ಲದೇ ಕಲಬುರಗಿಯಲ್ಲಿ ಕೂಡಾ ಮಾಧ್ಯಮ ಕ್ಷೇತ್ರದ ಬಗ್ಗೆ ಅವಹೇಳನಕಾರಿ ಹಾಗೂ ಮಾನಹಾನಿ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿಯನ್ನು ಕೂಡಾ ಕೂಡಲೇ ಬಂಧಿಸಬೇಕೆAದು ಆಗ್ರಹಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ತಾಲೂಕ ಪತ್ರಕರ್ತರ ಸಂಘದ ಸದಸ್ಯರಾದ ಶಾಮರಾವ, ಎಂ.ಪಿ. ರಾಮರಾವ, ವಿಶ್ವನಾಥ ಗಡ್ಡಿಮನಿ, ಜಗದೇವ ಗೌತಮ, ವಶೀಂ ಪಟೇಲ್, ಮೋಯಿನ್ ಪಟೇಲ್, ನಾಗರಾಜ ಸ್ವಾಮಿ, ಅಲ್ಲದೆ ಇತತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here