ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಕಾರ್ಯನಿರತ ಪತ್ರಕರ್ತರಿಂದ ಪ್ರತಿಭಟನೆ

0
1148

ಕಲಬುರಗಿ, ಆಗಸ್ಟ. 12: ಬೆಂಗಳೂರಿನ ಡಿಜೆ ಹಳ್ಳಿ, ಕಾವಲ ಭೈರಸಂದ್ರ ಮತ್ತು ಕೆಜಿ ಹಳ್ಳಿಯಲ್ಲಿ ನಿನ್ನೆ ರಾತ್ರಿ ಮಾಧ್ಯಮದವರ ಹಲ್ಲೆ ಮಾಡಿದ ದುಷ್ಕೃರ್ಮಿಗಳನ್ನು ಕೂಡಲೇ ಬಂಧಿಸಬೇಕೆAದು ಆಗ್ರಹಿಸಿ ಬುಧುವಾರ ನಗರದಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದರು.
ನಿನ್ನೆ ನಡೆದ ಡಿಜೆ ಮತ್ತು ಕೆಜಿ ಹಳ್ಳಿಯಲ್ಲಿನ ವಿದ್ವಂಸಕ ಕೃತ ನಡೆಸುತ್ತಿದ್ದ ದುಷ್ಕೃರ್ಮಿಗಳ ಘಟನೆಯ ಬಗ್ಗೆ ವರದಿ ಮಾಡಲು ಹೊದ ವರದಿಗಾರರು ಇದ್ದಾರೆಂದು ಗೊತ್ತಿದ್ದರೂ ಕ್ಯಾಮರಾ ಕಸಿದುಕೊಂಡು ಧ್ವಂಸ ಮಾಡಲಾಗಿದೆ. ಜತೆಗೆ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ದುಷ್ಕೃತ್ಯವೆಸಗಿದರನ್ನು ಬಂಧಿಸಬೇಕಲ್ಲದೇ ಪತ್ರಕರ್ತರು ನಿರ್ಭಿತಿಯಂದ ಕರ್ತವ್ಯ ನಿರ್ವಹಿಸಲು ವಿಶೇಷ ಕಾನೂನು ಸರಕಾರ ಜಾರಿಗೆ ತರಬೇಕೆಂದು ಜಿಲ್ಲಾ ಆಗ್ರಹಿಸಿತು.
ಇಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದರು ನೂರಾರು ಪತ್ರಕರ್ತರು ಆಗಮಿಸಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಕ್ಷ ಕ್ಷೇತ್ರದಲ್ಲಿ ಕೆಲಸ ಮಾಡುವ ವರದಿಗಾರರು ಹಾಗೂ ಕ್ಯಾಮರಾಮನ್ ಮತ್ತು ಎಲ್ಲ ಹಂತದ ಸಿಬ್ಬಂದಿ ವರ್ಗದವರ ಮೇಲೆ ದಿನಾಲು ಒಂದಿಲ್ಲ ಒಂದು ನಿಟ್ಟಿನಲ್ಲಿ ಹಲ್ಲೆ, ಮಾನಸಿಕ ಹಿಂಸೆಯ ಪ್ರಕರಣಗಳು ನಡೆಯುತ್ತಲ್ಲೆ ಇವೆ. ಹೀಗಾಗಿ ಮಾಧ್ಯಮದ ಮಿತ್ರರೆಲ್ಲರೂ ಕೆಲಸ ಮಾಡದಂತಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರನ ಡಿಜೆ ಹಳ್ಳಿ, ಕಾವಲ ಭೈರಸಂದ್ರ ಮತ್ತು ಕೆಜಿ ಹಳ್ಳಿಯ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದ ಗ¯ಭೆ ಸಂದರ್ಭದಲ್ಲಿ ವರದಿ ಮಾಡಲು ಹೋದ ವರದಿಗಾರರು ಹಾಗೂ ಕ್ಯಾಮರಮೆನ್‌ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಇದೇ ತೆರನಾದ ಘಟನೆಗಳು ಪದೇ-ಪದೇ ಜರುಗುತ್ತಿವೆ. ಇದರಿಂದ ಪತ್ರಕರ್ತರು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ಹೀಗಾಗಿ ರಾಜ್ಯ ಸರಕಾರ ಮಾಧ್ಯಮ ಕ್ಷೇತ್ರದ ಪತ್ರಕರ್ತರಿಗೆ ವಿಶೇಷ ಕಾನೂನು ರೂಪಿಸಬೇಕೆಂಬುದು ಸಂಘದ ಒಕ್ಕೂರಲಿನ ಆಗ್ರಹವಾಗಿದೆ. ಅದೇ ರೀತಿ ರಾಜ್ಯದಲ್ಲೂ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಲಿವೆ. ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾನಸಿಕ ಹಿಂಸೆ ಪ್ರಕರಣಗಳು ನಡೆಯುತ್ತಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಾಗಿದೆ.
ಈಗ ಸರಕಾರದಿಂದ ಭರವಸೆಯ ಮಾತುಗಳಿಗಿಂತ ಕಾನೂನು ಕ್ರಮದ ಅಗತ್ಯವಾಗಿದೆ. ಕಲಬುರಗಿಯಲ್ಲಿಯೂ ಕೂಡಾ ಮಾಧ್ಯಮ ಕ್ಷೇತ್ರದ ಬಗ್ಗೆ ಅವಹೇಳನಕಾರಿ ಹಾಗೂ ಮಾನಹಾನಿಕಾರಿ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ ಮಾಡಿದ್ದಕ್ಕೆ ಈಗಾಗಲೇ ಸಂಘದಿAದ ಎಫ್.ಐ.ಆರ್. ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿ ದಿನಕಳೆದರೂ ಆರೋಪಿಯನ್ನು ಪೋಲಿಸರು ಬಂಧಿಸಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತು ಪತ್ರಕರ್ತರ ರಕ್ಷಣೆಗೆ ಬರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಎಂ. ಠಾಕೂರ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಕೆಯುಡ್ಲೂö್ಯಜೆ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ಹಿರಿಯ ಪತ್ರಕರ್ತರಾದ ಎಸ್.ಬಿ. ಜೋಷಿ, ರಾಮಕೃಷ್ಣ ಬಡಶೇಷಿ, ಪತ್ರಕರ್ತರಾದ ಶಿವರಾಂ ಅಸುಂಡಿ, ಶೇಷಮೂರ್ತಿ ಅವಧಾನಿ, ಬಾಬುರಾವ ಯಡ್ರಾಮಿ, ದೇವೇಂದ್ರಪ್ಪ ಕಪನೂರ, ಪದಾಧಿಕಾರಿಗಳಾದ ದೇವೇಂದ್ರಪ್ಪ ಆವಂಟಿ, ಶಾಮಕುಮಾರ ಸಿಂಧೆ, ಸಂಗಮನಾಥ ರೇವತಗಾಂವ, ರಾಜಶೇಖರಯ್ಯ ಸ್ವಾಮಿ, ಅರುಣ ಕದಮ್, ವಿಜಯಕುಮಾರ ವಾರದ, ವೀರೇಂದ್ರ ಕೊಲ್ಲೂರ, ರಾಜು ದೇಶಮುಖ, ಮುಕ್ತಾರೋದ್ದಿನ್, ಪ್ರವೀಣರೆಡಿ, ಗೋಪಾಲರಾವ ಕುಲಕರ್ಣಿ, ಶೇಕ್‌ಬಾಬಾ, ರಾಜು ಉದನೂರ, ಸಂಜುರೆಡ್ಡಿ, ಹಣಮಂತರಾವ ಭೈರಾಮಡಗಿ, ಗಂಗಾಧರ ಸ್ವಾಮಿ, ಬಜರಂಗಿ, ಸೇರಿದಂತೆ ಇನ್ನು ಹಲವಾರು ಪತ್ರಕರ್ತರು ಭಾಗವಹಿಸಿ, ಘೋಷಣೆಗಳನ್ನು ಕೂಗುತ್ತಿದ್ದರು.

LEAVE A REPLY

Please enter your comment!
Please enter your name here