ಡಿಜೆ, ಕೆಜೆ ಹಳ್ಳಿಯಲ್ಲಿನ ಘಟನೆ ಪೂರ್ವಯೋಜಿತ ದೇಶದ್ರೋಹಿಗಳಿಂದ ನಡೆದ ಕೃತ್ಯ: ಆರ್. ಅಶೋಕ

0
986

ಬೆಂಗಳೂರು, ಆಗಸ್ಟ. 12: ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಘಟನೆಯು ದೇಶದ್ರೋಹಿಗಳು ಮಾಡಿದ್ದಾಗಿದೆ ಎಂದು ಸಚಿವ ಆರ್. ಅಶೋಕ ಹೇಳಿದ್ದಾರೆ.
ದುರ್ಷ್ಕೃಮಿಗಳು ನಡೆಸಿದ ಈ ಘಟನೆ ನೋಡಿದರೆ ಬೇರೆ ಬೇರೆ ರಾಜ್ಯಗಳಲ್ಲಿ ನಕ್ಸಲ್‌ರು ಠಾಣೆಗೆ ಬೆಂಕಿ ಹಚ್ಚುವುದು ಮಾಡುತ್ತರೆ ಆದರೆ ಇಲ್ಲಿ ಮಾಡಿರುವುದು ಪೂರ್ವಯೋಜಿತ ಕೃತ್ಯವಾಗಿದೆ ಈ ಘಟನೆಯಲ್ಲಿ ಒಂದು ಸಮುದಾಯದ ಪುಂಡರು ಹಲ್ಲೆ ಮತ್ತು ಬೆಂಕಿ ಹಚ್ಚುವುದು ದರೋಡೆ ಮಾಡಿರುವುದು ಸಮುದಾಯಗಳನ್ನು ನೋಡಿ ಮಾಡಿದ್ದ ಕೃತ್ಯವಾಗಿದೆ. ಅಲ್ಲದೇ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಮುಗಿಸಬೇಕು ಎಂಬ ಉದ್ದೇಶದಿಂದ ರೋಷವಾಗಿ ಮಾಡಿದ್ದಾರೆ ಎಂದರು.
ಕೃತ್ಯ ವೆಸಗಿದವರು ಕಿಡಗೇಡಿಗಳಲ್ಲ ಅವರು ದೇಶದ್ರೋಹಿಗಳು ಅನ್ನೊದು ಮಾತ್ರ ಸತ್ಯ. ಪಾಪಿಗಳಿಗೆ ಎಚ್ಚರಿಕೆ ನೀಡುತ್ತ ಯಾರೇ ಇರಲಿ ಅವರನ್ನೆಲ್ಲ ಹೇಡೆಮುರಿ ಕಟ್ಟಿ ಮನೆಯಿಂದ ಎಳೆದು ತಂದು ಶಿಕ್ಷಿಸಲಾಗುವುದು. ಮುಂದೆ ಇಂತಹ ಕೃತ್ಯವೆಸಗಬೇಕಾದರೆ ನೂರುಸಲ ಯೋಚಿಸಬೇಕು, ಮುಟ್ಟಿ ಮುಟ್ಟಿ ನೋಡಿಕೊಳ್ಳಬೇಕು ಅನ್ನುವ ತರಹ ಅವರನ್ನು ಶಿಕ್ಷಿಸಲಾಗುವುದು ಎಂದರು.
ಪೋಲಿಸರ ಕಾರ್ಯ ಶ್ಲಾಘನೀಯವಾಗಿದೆ. ಸಮಯಪ್ರಜ್ಞೆಯಿಂದ ವರ್ತಿಸಿದ್ದರಿಂದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಕಿಡಿಗೇಡಿಗಳು ಕೈಯಲ್ಲಿ ಮಚ್ಚು, ಲಾಂಗೂ, ಕಲ್ಲು, ಇಟ್ಟಿಗೆ ಅಲ್ಲದೇ ಮಾರಕ ಅಸ್ತçಗಳನ್ನು ಬಹಳ ದಿನಗಳಿಂದಯೇ ಸಂಗ್ರಹಿಸಿ, ಬೆಂಗಳೂರಿನ ಬೇರೆ ಬೇರೆ ಏರಿಯಾಗಳಿಗೆ ಹೋಗಿ ಅಶಾಂತಿ ಎಬ್ಬಿಸುವ ಹುನ್ನಾರವನ್ನು ದೇಶದ್ರೋಹಿಗಳು ಸಂಚು ರೂಪಿಸಿದ್ದರು ಎಂದರು. ಎಷ್ಟೇ ಮನವಿ ಮಾಡಿದರೂ ಪೋಲಿಸರ ಮನವಿ ಜಗ್ಗದ ದೇಶದ್ರೋಹಿಗಳಿಗೆ ಗುಂಡು ಹಾರಿಸುವ ಮೂಲಕ ಕೇವಲ 4 ಗಂಟೆಯಲ್ಲಿಯೇ ಗಲಭೆಪೀಡಿತ ಪ್ರದೇಶ ಹತೋಟಿಗೆ ತೆಗೆದುಕೊಂಡಿದ್ದು ಶ್ಲಾಘನೀಯವಾಗಿ ದೆ ಎಂದರು.
ಒAದು ಹಂತದಲ್ಲಿ ಡಿಸಿಪಿಯನ್ನು ಕೂಡಿ ಹಾಕುವ ಪ್ರಯತ್ನ ಮಾಡಿದ್ದ ದೇಶದ್ರೋಹಿಗಳಿಂದ ಇನ್ನು ಹಲವಾರು ಪ್ರಯತ್ನ ಮಾಡಲಾಗಿತ್ತು.
ಈ ಹಿಂದೆ ಕೂಡಾ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ ಪಾದರಾಯನಪೂರ ಘಟನೆಯನ್ನು ನೆನಪಿಸಿದ ಅವರು, ಅಲ್ಲಿಯ ಘಟನೆಯೆ ಬೇರೆ ಆದರೂ ಅಲ್ಲಿ ಪೋಲಿಸರು ಕ್ರಮ ಕೈಗೊಂಡಿದ್ದು ಅಲ್ಲದೇ ಆರೋಪಿಗಳನ್ನೆಲ್ಲ ಬಂಧಿಸಿ ಶಿಕ್ಷಿಸಿದ್ದೇವೆ ಎಂದರು.
ಈ ಘಟನೆಯ ಹಿಂದೆ ಎಸ್.ಡಿ.ಪಿ.ಐ. ಸೇರಿದಂತೆ ಹಲವಾರು ಸಂಘಟನೆಯ ಕೈವಾಡದ ಶಂಕೆ ವ್ಯಕ್ತಪಡಿಸಿದ ಅವರು ಈ ಬಗ್ಗೆ ಕೂಲಂಕೂಷವಾಗಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

LEAVE A REPLY

Please enter your comment!
Please enter your name here