ದಾಲ್ ಮಿಲ್‌ಗಳ ಉಳಿವಿಗೆ ಸರಕಾರ ಹೊಡೆತ: ಅಮರನಾಥ ಪಾಟೀಲ್

0
1197

ಕಲಬುರಗಿ, ಆಗಸ್ಟ, ೯: ಲಾಕ್‌ಡೌನ್‌ನಿಂದಾಗಿ ನಮ್ಮ ಡಾಲ್ ಗಿರಣಿಗಳು ತುಂಬಾ ತೊಂದರೆ ಅನುಭವಿಸಿವೆ ಮತ್ತು ಎರಡು ತಿಂಗಳ ಲಾಕ್‌ಡೌನ್ ಪ್ರಭಾವದಿಂದಾಗಿ ೧೦೦ ಕ್ಕೂ ಹೆಚ್ಚು ಡಾಲ್ ಗಿರಣಿಗಳನ್ನು ಮುಚ್ಚಲಾಗಿದೆ. ಡಾಲ್ ಗಿರಣಿಗಳನ್ನು ಉಳಿಸುವ ಅವಶ್ಯಕತೆಯಿದೆ. ವಾರ್ಷಿಕ ವಹಿವಾಟು ಮಿತಿಯನ್ನು ೨೫.೦೦ ಕೋಟಿ ರೂ.ಗೆ ಹೆಚ್ಚಿಸುವ ಮೂಲಕ ಡಾಲ್ ಗಿರಣಿಗಳ ಉಳಿವಿಗೆ ಸರ್ಕಾರ ಹೊಡೆತ ನೀಡಿದೆ ಎಂದು ಹೆಚ್.ಕೆ.ಸಿ.ಸಿ.ಐ ಅಧ್ಯಕ್ಷರಾದ ಅಮರನಾಥ ಪಾಟೀಲ್ ಅವರು ಹೇಳಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬಿಸಿಊಟ ಯೋಜನೆಯಡಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ಅಗತ್ಯವಾದ ಆಹಾರ ಧಾನ್ಯಗಳನ್ನು ಖರೀದಿಸುತ್ತಿದ್ದು, ಬಿಸಿ ಊಟ ಯೋಜನೆಯಡಿ ಕೆಂಪು ತೊಗರಿಯನ್ನು ನಿಗಮಕ್ಕೆ ಸರಬರಾಜು ಮಾಡಲು ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದು, ಇದರಲ್ಲಿ ಭಾಗವಹಿಸಲು ವಾರ್ಷಿಕವಾಗಿ ತೊಗರಿ ಕಾರಖಾನೆಗಳು ೨೫ ಕೋಟಿ ರೂ. ವಹಿವಾಟು ಹೆಚ್ಚಿಸಿದ್ದು ಸರಿಯಾದ ಕ್ರಮವಲ್ಲ ಎಂದರು.
ಅವರಿಂದಿಲ್ಲಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಜಿಲ್ಲೆಯಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ತೊಗರಿ ಕಾರಖಾನೆಗಳಿದ್ದು, ಇದರಲ್ಲಿ ವಾರ್ಷಿಕವಾಗಿ ೨೫ ಕೋಟಿ ರೂ.ಗಳ ವಹಿವಾಟು ಇರುವದು ಬೆರಳಣಿಕೆಯ ಕಾರಖಾನೆಗಳು ಮಾತ್ರ. ಇದರಿಂದಾಗಿ ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಂಚಿತರಾಗುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ದಾಲ್ ಮಿಲ್‌ನಗಳನ್ನು ಕಸಿದುಕೊಳ್ಳಲು ಮತ್ತು ಅದನ್ನು ೨೫ ಕೋಟಿ ರೂ.ಗೆ ಹೆಚ್ಚಿರುವುದು ಆಯ್ದ ಕೆಲವರಿಗೆ ಮಾತ್ರ ಸೀಮಿತಗೊಳಿಸುವ ವ್ಯವಸ್ಥಿತ ಹುನ್ನಾರವಾಗಿದ್ದು, ಸರಕಾರಕ್ಕೆ ಸ್ಪರ್ಧಾತ್ಮಕ ದರವನ್ನು ಕಸಿದುಕೊಳ್ಳುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ದಾಲ್ ಮಿಲ್‌ಗಳ ವಾರ್ಷಿಕ ವಹಿವಾಟು ಈ ಹಿಂದೆ ಇದ್ದಂತೆ ೨.೦೦ ಕೋಟಿಗೆ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ನಮ್ಮ ಡಾಲ್ ಗಿರಣಿಗಳು ತುಂಬಾ ತೊಂದರೆ ಅನುಭವಿಸಿವೆ ಮತ್ತು ಎರಡು ತಿಂಗಳ ಲಾಕ್‌ಡೌನ್ ಪ್ರಭಾವದಿಂದಾಗಿ ೧೦೦ ಕ್ಕೂ ಹೆಚ್ಚು ಡಾಲ್ ಗಿರಣಿಗಳನ್ನು ಮುಚ್ಚಲಾಗಿದೆ. ಡಾಲ್ ಗಿರಣಿಗಳನ್ನು ಉಳಿಸುವ ಅವಶ್ಯಕತೆಯಿದೆ. ವಾರ್ಷಿಕ ವಹಿವಾಟು ಮಿತಿಯನ್ನು ೨೫.೦೦ ಕೋಟಿ ರೂ.ಗೆ ಹೆಚ್ಚಿಸುವ ಮೂಲಕ ಡಾಲ್ ಗಿರಣಿಗಳ ಉಳಿವಿಗೆ ಸರ್ಕಾರ ಹೊಡೆತ ನೀಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಾಲ್ ಮಿಲ್ಸರ್ ಸಂಘದ ಅಧ್ಯಕ್ಷರಾದ ಶೀವಶರಣಪ್ಪ ನಿಗ್ಗುಡಗಿ, ಕಾರ್ಯದರ್ಶಿ ಶರಣಬಸಪ್ಪ ಮಚ್ಚಟ್ಟಿ, ಚನಬಸ್ಸಯ್ಯ ನಂದಕೋಲ, ಚಂದ್ರಶೇಖರ ತಳ್ಳಳ್ಳಿ, ಭೀಮಾಶಂಕರ ಪಾಟೀಲ್ ಅವರುಗಳು ಇದ್ದರು.

LEAVE A REPLY

Please enter your comment!
Please enter your name here