ಕಲಬುರಗಿ, ಆ. 2: ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಮೊದಲ ಅಧ್ಯಕ್ಷರಾಗಿ ಶ್ರೀ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಆಗಸ್ಟ್ 3 ನೇ ದಿನಾಂಕದAದು ಬೆಳಿಗ್ಗೆ 10 ಗಂಟೆಗೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಇತ್ತೀಚೆಗೆ ಅಷ್ಟೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಒಂದು ವರ್ಷ ಅಧಿಕಾರಾವಧಿ ರಾಜ್ಯದಲ್ಲಿ ಪೂರೈಸಿದ ಹಿನ್ನೆಲೆಯಲ್ಲಿ ನೆನಗುದಿಗೆ ಬಿದ್ದದ ನಿಗಮ ಮಂಡಳಿಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡಿದ್ದರು. ಅಲ್ಲದೇ ಮೊದಲ ಬಾರಿಗೆ ಕಲ್ಯಾನ ಕರ್ನಾಟಕ ವಿಭಾಗೀಯ ಅಭಿವೃದ್ಧಿ ಮಂಡಳಿಗೆ ಅಪ್ಪುಗೌಡ ಅವರನ್ನು ನೇಮಿಸಿ ಆದೇಶ ನೀಡಿದ್ದರು.