ಕಲಬುರಗಿ, ಆ. 2: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಡಿ. ಕೆ. ಶಿವಕುಮಾರ ಮಂಗಳವಾರ ದಿನಾಂಕ 4.8.2020ರಂದು ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮಂಗಳವಾರ ಬೆಳಿಗ್ಗೆ 9.45ಕ್ಕೆ ಸ್ಟಾರ್ ಏರ್‌ವಿಮಾಣದ ಮೂಲಕ ನಗರಕ್ಕೆ ಆಗಮಿಸಲಿರುವ ಅವರು ನಂತರ 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ, ಮಧ್ಯಾಹ್ನ 12.30ಕ್ಕೆ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ನಂತರ ಸಂಜೆ 5 ಗಂಟೆಗೆ ರಸ್ತೆಯ ಮೂಲಕ ಹೈದ್ರಾಬಾದಗೆ ತೆರಳಿ ಸಂಜೆ 9.30ಕ್ಕೆ ಬೆಂಗಳೂರಿಗೆ ಪ್ರಯಾನ ಬೆಳಸಲಿದ್ದಾರೆ.
ಕಳೆದ ತಿಂಗಳು ಜುಲೈ 2ರಂದು ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ.ಶಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು.