1 ಲಕ್ಷ 30 ಸಾವಿರಕ್ಕೆ ತಲುಪಿದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು

0
905

ಬೆಂಗಳೂರು, ಆಗಸ್ಟ 1: ಡೇಂಜರ್ ಡೆಡ್ಲಿ ವೈರಸ್ ಕೊರೊನಾಗೆ ಇಂದು ರಾಜ್ಯದಲ್ಲಿ 5117 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಇಲ್ಲಿಯವರೆಗೆ ಒಟ್ಟು 129287 ಪ್ರಕರಣಗಳು ದಾಖಲಾದಂತಾಗಿವೆ.
ಇಂದು ಈ ರೋಗಕ್ಕೆ 98 ಮಂದಿ ತುತ್ತಾಗಿದ್ದು, ರಾಜ್ಯದಲ್ಲಿ ಕೊರೊನಾಗೆ 2412 ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಬೆಂಗಳೂರು ನಗರದ ಒಂದರಲ್ಲೆ ಅತಿ ಹೆಚ್ಚು ಬಲಿ ಅಂದರೆ 1056 ಆಗಿದ್ದು, ಇಂದು ಬೆಂಗಳೂರಿನಲ್ಲಿ 27 ಜನರು ಬಲಿಯಾಗಿದ್ದಾರೆ.
ಈ ರೋಗದಿಂದ ಗುಣಮುಖರಾಗಿ ಇಂದು 3860 ಮಂದಿ ಸೇರಿ ಇಲ್ಲಿಯವರೆಗೆ 53648 ಮಂದಿ ಮನೆ ಸೇರಿದ್ದಾರೆ.
ಒಟ್ಟು ಪ್ರಕರಣಗಳಲ್ಲಿ 73219 ಸಕ್ರೀಯ ಪ್ರಕರಣಗಳಿದ್ದು, 602 ಜನರು ಕೋವಿಡ್ ಐಸಿಯು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜುಲೈ ತಿಂಗಳು ಒಂದರಲ್ಲೇ ಕೋವಿಡ್19 ಕ್ಕೆ 1 ಲಕ್ಷಕ್ಕೂ ಅಧಿಕ ಜನರು ಸೋಂಕಿಗೆ ಒಳಪಟ್ಟಿದ್ದು, ದಿನದಿಂದ ದಿನಕ್ಕೆ ಈ ಸಂಖ್ಯೆ ಕಡಿಮೆಯೇನೋ ಆಗುತ್ತಿಲ್ಲ.
ಬೆಂಗಳೂರು ನಗರದಲ್ಲಿ ಇಂದು 1852 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಉಳಿದಂತೆ ರಾಜ್ಯದೆಲ್ಲಡೆ ಕೊರೊನಾ ಪ್ರಕರಣಗಳ ಇಂದಿನ ಸಂಖ್ಯೆ ಹೀಗಿದೆ.
ಮೈಸೂರು 365, ಬಳ್ಳಾರಿ 269, ಕಲಬುರಗಿಯಲ್ಲಿ 219, ಬೆಳಗಾವಿಯಲ್ಲಿ 219, ಧಾರವಾಡದಲ್ಲಿ 184, ಹಾಸನದಲ್ಲಿ 146, ದಕ್ಷಿಣ ಕನ್ನಡದಲ್ಲಿ 139, ಉಡುಪಿ, 136, ಬಾಗಲಕೋಟೆ 134, ವಿಜಯಪುರ 129, ಶಿವಮೊಗ್ಗ 119, ರಾಯಚೂರು 109, ದಾವಣಗೆರೆ 108, ಕೊಪ್ಪಳ 107, ತುಮಕೂರು 99, ಗದಗ 99, ಮಂಡ್ಯ 95, ಬೆಂಗಳೂರು ಗ್ರಾಮಾಂತರ 93, ಚಿಕ್ಕಬಳ್ಳಾ ಪೂರ 72, ಚಿತ್ರದುರ್ಗದಲ್ಲಿ 60, ಚಿಕ್ಕಮಗಳೂರು 57, ಬೀದರ 52, ಹಾವೇರಿ 52, ಉತ್ತರ ಕನ್ನಡ 51, ರಾಮನಗರ 51, ಚಾಮರಾಜನಗರ 43, ಯಾದಗಿರಿ 43, ಕೋಲಾರ 39, ಕೊಡಗು 35 ಪ್ರಕರಣಗಳು ವರದಿಯಾಗಿವೆ.

LEAVE A REPLY

Please enter your comment!
Please enter your name here