ಪ.ಜಾ. ಪಟ್ಟಿಯಿಂದ ಅಸ್ಪೃಶ್ಯರಲ್ಲದ ಜಾತಿಗಳನ್ನು ಕೈಬಿಡಲು ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭಾ ಒತ್ತಾಯ

0
1177

ಕಲಬುರಗಿ, ಜುಲೈ. 31: ಲಮಾಣಿ, ಬೋವಿ, ಕೋರಮ ಮತ್ತು ಕೊರಚ ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭಾ ಇಂದು ಸರಕಾರವನ್ನು ಒತ್ತಾಯಿಸಿದೆ.
ಭಾರತದ ಯಾವುದೇ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಈ ನಾಲ್ಕು ಜಾತಿಗಳಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಿಂದ ಮೂಲಕ ಅಸ್ಪೃಶ್ಯರಿಗೆ ಎಲ್ಲಾ ರಂಗಗಳಲ್ಲಿ ಅನ್ಯಾಯವಾಗಿದೆ ಅಲ್ಲದೇ ಸಂವಿಧಾನದ ಪರಿಚ್ಛೇಧ ಉಲ್ಲಂಘನೆಯಾಗಿರುತ್ತದೆ ಎಂದು ಮಹಸಭಾದ ಗೌರವಾಧ್ಯಕ್ಷರೂ. ಮಾಜಿ ಸಚಿವರೂ ಆದ ಕೆ.ಬಿ. ಶಾಣಪ್ಪ ಅವರು ಆಗ್ರಹಿಸಿದ್ದಾರೆ.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಯಲ್ಲಿ ಮಾತನಾಡುತ್ತ, 2019ರಲ್ಲಿ ಸುಪ್ರೀಂ ಕೋರ್ಟಗೆ ಈ ನಾಲ್ಕು ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿದ ಘನ ನ್ಯಾಯಾಲಯ, ನಾಲ್ಕು ವಾರದೊಳಗೆ ರಾಷ್ಟಿçÃಯ ಪರಿಶಿಷ್ಟ ಜಾತಿ ಆಯೋಗಕ್ಕೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಲು ನಿರ್ದೇಶನ ನೀಡದ ಹಿನ್ನೆಲೆಯಲ್ಲಿ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಗಣಿಸಿ 1936 ಕಾಯ್ದೆ ಉಲ್ಲಂಘಿಸಿ, ನಾಲ್ಕು ಜಾತಿಗಳು ಪ.ಜಾ. ಪಟ್ಟಿಯಿಂದ ಕೈಬಿಡಲು ಕೋರಿರುವ ಪ್ರಯುಕ್ತ ಕ್ರಮ ಜರುಗಿಸಿ ತಮ್ಮ ಅಭಿಪ್ರಾಯಗಳೊಂದಿಗೆ ವರದಿ ಸಲ್ಲಿಸಲು ರಾಷ್ಟಿçÃಯ ಅನುಸೂಚಿತ ಜಾತಿಗಳ ಆಯೋಗ ಕರ್ನಾಟಕ ಸರಕಾರಕ್ಕೆ ಪತ್ರ ರವಾನಿಸಿ ವಿಷಯದ ಬಗ್ಗೆ ತೆಗೆದುಕೊಂಡ ಕ್ರಮದ ವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.
ಆದರೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಭಾರತದ ಸಂವಿಧಾನದ 341 (2) ಪ್ರಕಾರ ಇಲ್ಲಿಯವರೆಗೆ ಅಗತ್ಯ ಕ್ರಮಕೈಗೊಳ್ಳಬೇಕಿತ್ತು. ಆದರೆ ಸರಕಾರ ವರದಿ ಸಿದ್ದಪಡಿಸಿ ಕೇಂದ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಕಳುಹಿಸಿಕೊಡಲು ವಿಳಂಬ ಧೋರಣೆ ಅನುಸುತ್ತಿರುವುದು ಅಲ್ಲದೇ ಅಸ್ಪೃಶ್ಯರಲ್ಲದ ಜಾತಿಗಳ ಮೇಲೆ ಮೃದು ಧೋರಣೆ ತೋರುತ್ತಿರುವುದು ತೀವ್ರ ಖಂಡನಾರ್ಹವಾಗಿದೆ ಎಂದರು.
ಕೂಡಲೇ ಸರಕಾರ ಎಚ್ಚೆತ್ತು ಈ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲು ವಿಳಂಬಮಾಡಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಶಾಣಪ್ಪ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿ.ಪಂ. ಅಧ್ಯಕ್ಷ ಹಾಗೂ ಮಹಾಸಭಾದ ಅಧ್ಯಕ್ಷರಾದ ಭೀಮರಾವ ಟಿಟಿ, ಕಾರ್ಯಾಧ್ಯಕ್ಷರಾದ ಬಿ. ಬಿ. ರಾಂಪುರೆ, ಮಹಾಸಭಾದ ಹಿರಿಯ ಉಪಾಧ್ಯಕ್ಷರಾದ ಬಸಣ್ಣ ಸಿಂಗೆ, ಡಾ. ಮಲ್ಲಿಕಾರ್ಜುನ ಗಾಜರೆ, ಕಾಶಿರಾಯ ನಂದೂರಕರ್, ಪ್ರಧಾನ ಕಾರ್ಯದರ್ಶಿ ಲಕ್ಷಿö್ಮÃಕಾಂತ ಹುಬಳಿ, ಹಣಮಂತ ಬೋಧನಕರ್, ಶಾಮ ನಾಟಿಕರ್, ಪರಮೇಶ್ವರ ಖಾನಾಪೂರ, ಲಿಂಗರಾಜ ತಾರಫೇಲ್ ಸೇರಿದಂತೆ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here