ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ

0
1006

ಕಲಬುರಗಿ, ಜುಲೈ. 31: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲ್ಲೇ ಇದ್ದು, ಸರಕಾರ ಹೊರಡಸಿದ ಮಾರ್ಗಸೂಚಿಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ.
ತರಕಾರಿ ಮಾರುಕಟ್ಟೆಯಿಂದ ಹಿಡಿದು, ಹೊಟೆಲ್, ಅಂಗಡಿ ಮುಗ್ಗಟುಗಳು, ಅಷ್ಟೇ ಅಲ್ಲ ಬ್ಯಾಂಕ್‌ಗಳು, ಸರಕಾರಿ ಕಛೇರಿಗಳಲ್ಲಿಯೂ ಕೂಡಾ ಸಾಮಾಜಿಕ ಅಂತರವಿಲ್ಲ, ಹ್ಯಾಂಡ್ ಸ್ಯಾನಿಟೈಜರ್ ಅಂತೂ ಇಟ್ಟಿರುತ್ತಾರೆ. ಅದಕ್ಕೆ ನೂರಕ್ಕೆ 80ರಷ್ಟು ನೀರು ಬೇರೆಸಿ ಕಾಟಾಚಾರಕ್ಕೆ ಕೋವಿಡ್ ನಿಯಂತ್ರಣಕ್ಕೆ ಕೊಡುಗೆ ನೀಡುತ್ತಾರೆ.
ಬರುವ ರವಿವಾರದಿಂದ ಅಂತೂ ಮತ್ತೇ ಅದೇ ರಾಗ ಅದೇ ಹಾಡು, ಸಂಡೇ ಲಾಕ್‌ಡೌನ್ ಮುಕ್ತಾಯವಲ್ಲದೇ ನೈಟ್ ಕರ್ಫ್ಯೂ ಕೂಡಾ ಇರುವುದಿಲ್ಲ. ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ಮಹಾನಗರಸಭೆ ಹಾಗೂ ಪೋಲಿಸ್ ಇಲಾಖೆಯ ನೆರವಿನಿಂದ ಅಧಿಕಾರಿಗಳನ್ನು ನೇಮಿಸಿ, ಒಂದೊAದು ತಂಡ ರಚಿಸಿ, ಸರಕಾರದ ಕೋರೊನಾ ನಿಯಂತ್ರಣಕ್ಕೆ ಹಾಕಿದ ಮಾರ್ಗಸೂಚಿಗಳ ಪಾಲನೆ ಮಾಡುವಲ್ಲಿ ಯಶಸ್ವಿಯಾಗುವರೇ ಕಾದು ನೋಡಬೇಕಾಗಿದೆ.
ಇನ್ನು ಸಿ.ಇ.ಟಿ. ಪರೀಕ್ಷಗೆ ಹೋಗುವಾಗ ಎಲ್ಲರನ್ನು ಸರತಿಯಲ್ಲಿ ನಿಲ್ಲಿಸಿ ಒಬ್ಬೊಬ್ಬರನ್ನು ಹಾಲ್ ಒಳಗೆ ಹೋಗುವಂತೆ ವ್ಯವಸ್ಥೆ ಮಾಡಿದ್ದು, ಆದರೆ ಪರೀಕ್ಷೆ ಬಿಟ್ಟ ಬಳಿಕ ಅಲ್ಲದೇ ಪರೀಕ್ಷೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಮುಂದೆ ಗುಂಪುಗುAಪಾಗಿ ವಿದ್ಯಾರ್ಥಿಗಳು, ಪಾಲಕರು ಜಮಾಯಿಸಿರುವುದು ಎಲ್ಲಡೆ ಗೋಚರಿಸುತ್ತಿತ್ತು. ಇದು ಸರಕಾರದ ಕೈಗೊಂಡ ಕಟ್ಟುನಿಟ್ಟಿನ ಕರೊನಾ ನಿಯಂತ್ರಣದ ಕ್ರಮಗಳು?

LEAVE A REPLY

Please enter your comment!
Please enter your name here