ಗೋವುಗಳನ್ನು ರಕ್ಷಿಸಿದ ಲೇಡಿ ಸಿಂಗಮ್ ಯಶೋಧಾ ಕಟಕೆ

0
1355

ಕಲಬುರಗಿ, ಜುಲೈ. 31: ಪರಹತಾಬಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಸಿರನೂರ ಬಳಿ ನಿನ್ನೆ ಬೆಳಿಗ್ಗೆ 3 ಗಂಟೆ ಸುಮಾರು 10 ಗೋವುಗಳನ್ನು ಲೇಡಿ ಸಿಂಗA ಆಗಿರುವ ಪಿಎಸ್.ಐ. ಯಶೋಧಾ ಕಟಕೆ ಅವರು ರಕ್ಷಿಸಿ, ವಾಹನ ಜಪ್ತಿ ಮಾಡಿ ಪರತಾಬಾದ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿ ಸಲಾಗಿದೆ.
ಅವುಗಳನ್ನು ತುಂಬಿದ ಒಂದು ಟಾಟಾ ಯೇಸ್‌ನ್ನು ಜಪ್ತಿ ಮಾಡಿದ ಅವರು ಗೋವುಗಳನ್ನು ಗೋಶಾಲೆಗೆ ಸೇರಿದರು.
9 ಹಸು, ಸೇರಿದಂತೆ 2ಎಮ್ಮೆ ಕರು ವಶಕ್ಕೆ ಪಡೆದು ಕಟಕರಿಂದ ಅವುಗಳನ್ನು ರಕ್ಷಿಸುವ ಮೂಲಕ ಸಾವಿರಾರು ಜನರಿಂದ ಪ್ರಶಂಸೆಗೆ ಪಾತ್ ರಾಗಿದ್ದಾರೆ.
ಇವರ ಮಾಡಿದ ಈ ಉತ್ತಮವಾದ ಕೆಲಸಕ್ಕೆ ರಾಜ್ಯದ ಹಲವಾರು ಜಿಲ್ಲೆಗಳಿಂದ ಅಲ್ಲದೇ ಹೊರ ರಾಜ್ಯದ ಹಲವಾರು ಜಿಲ್ಲೆಗಳಿಂದ ಕಟಕೆ ಅವರಿಗೆ ದೂರವಾಣಿ ಕರೆಯ ಮೂಲಕ ಅಭಿನಂದಿಸಿ, ಒಬ್ಬರು ಅಮ್ಮ, ಇನ್ನೊಬ್ಬರು ಅಕ್ಕ ಎಂಬ ಪದ ಬಳಸಿ ಅವರನ್ನು ಅಕ್ಕರೆಯಿಂದ ಅಭಿನಂದಿಸಿ ಫೇಸ್‌ಬುಕ್, ವಾಟ್ಸಪ್‌ಗಳಲ್ಲಿ ಪೋಸ್ಟಗಳನ್ನು ಹಾಕುತ್ತಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧವಿದ್ದರೂ ಸಹ ಇಂತಹ ಕೆಲಸ ನಡೆಯುತ್ತಿದ್ದು, ನಗರದ ರಾಮ ಮಂದಿರ ಸರ್ಕಲ್ ಹತ್ತಿರ ರಾತಿ ಸಮಯದಲ್ಲಿ ಇಂತಹ ಹಲವಾರು ಪ್ರಕರಣಗಳು ವರದಿಯಾಗುತ್ತಿದ್ದು, ಕೆಲವರು ಪೋಲಿಸರಿಗೆ ಕಣ್ಣಿಗೆ ಮಣ್ಣೆರಚಿ ಗೋವುಗಳನ್ನು 20 ರಿಂದ 30 ಸಾವಿರ ರೂ.ಗಳಿಗೆ ಕಟಕರಿಗೆ ಮಾರುತ್ತಿದ್ದು, ಇದು ನಿಲ್ಲಬೇಕು ಎಂಬುದು ಎಲ್ಲರ ಹಂಬಲ ಮತ್ತು ಆಶಯವಾಗಿದೆ.

LEAVE A REPLY

Please enter your comment!
Please enter your name here