ಕಲಬುರಗಿ, ಜುಲೈ. 30: ನಾಳೆ ಶ್ರಾವಣ ಶುಕ್ರವಾರ ಹಿಂದೂ ಪದ್ಧತಿಯ ಪ್ರಕಾರ ಇಂದೊAದು ದೊಡ್ಡ ಶುಕ್ರವಾರ ಎಲ್ಲರ ಮನೆಯಲ್ಲಿ ಶ್ರಾವಣ ಶುಕ್ರವಾರ ನಿಮಿತ್ಯ ಲಕ್ಷಿö್ಮÃ ಪೂಜೆಗಾಗಿ ಎಲ್ಲಿಲ್ಲದ ಸಡಗರ. ಬಾಳೆ ದಿಂಡು, ಹೂ, ಹಣ್ಣು, ಎಲೆ, ಕಾಯಿಪಲ್ಲೆ ಖರೀದಿಯಲ್ಲಿ ತೊಡಗಿದ್ದ ಸಾರ್ವಜನಿಕರು ಕಡ್ಡಾಯವಾಗಿ ನೂರಕ್ಕೆ 90ರಷ್ಟು ಮುಖಕ್ಕೆ ಮಾಸ್ಕ್ ಹಾಕಿಕೊಂಡೆ ಇದ್ದುದ್ದು ಎಲ್ಲಡೆ ಕಂಡುಬAದಿತಾದರೂ, ವ್ಯಾಪಾರಸ್ಥರು ಮಾತ್ರ ಮುಖಕ್ಕೆ ಮಾಸ್ಕ ಧರಿಸದೇ ಕೊರೊನಾ ವಿರುದ್ಧದ ಸರಕಾರದ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಿದ್ದು, ಈ ಬಗ್ಗೆ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳುವುದೇ?
ಪ್ರತಿ ಅಂಗಡಿಯಾಗಲೀ, ಬೀದಿ ವ್ಯಾಪಾರಿಗಳ ಬಂಡಿಗಳಾಗಲೀ, ಸಣ್ಣ ಪುಟ್ಟ ವ್ಯವಹಾರ ರಸ್ತೆ ಬದಿ ಮಾಡುವವರು ಯಾರೇ ಆಗಿರಲಿ ಅವರು ಮಾಸ್ಕ ಧರಿಸದೇ ಇದ್ದರೆ ಅವರ ಬಳಿ ಯಾರು ಖರೀದಿ ಮಾಡಬೇಡಿ ಎಂಬ ಬೋರ್ಡ ಹಾಕಿದರೆ ಉತ್ತಮವೆಂಬುದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರ ಅನಿಸಿಕೆಯಾಗಿದೆ. ಈ ನಿಟ್ಟಿನಲ್ಲಿ ಪೋಲಿಸರು ಕ್ರಮ ಕೈಗೊಳ್ಳುವರೇ ಕಾದು ನೋಡೋಣ?
ಸಾಮಾಜಿಕ ಅಂತರವAತೂ ದೂರವೇ ಆಗಿದೆ. ಆದರೆ ಮುಖಕ್ಕೂ ಮಾಸ್ಕ ಧರಿಸದೇ ಇರುವುದು ದಿನೇ ದಿನೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗತೊಡಗಿದ್ದು, ಇದರಿಂದ ಅಜಾಗ್ರತೆ ವಹಿಸಿದರೆ ಸಮುದಾಯಗಳಲ್ಲಿ ಈ ಸೋಂಕು ಹರಡಿದರೆ ಗತಿಯೇನು? ಇಲಾಖೆಯಾಗಲೀ, ಮಹಾನಗರಪಾಲಿಕೆಯ ಆರೋಗ್ಯ ಅಧಿಕಾರಿಗಳಾಗಲೀ ಇತ್ತ ಗಮನ ಹರಿಸಿ, ಒಂದೇರಡು ಬಾರಿ ಎಚ್ಚರಿಕೆ ನೀಡಿ ಅದೂ ಪಾಲಿಸಲಿಲ್ಲವೆಂದರೆ ಮಾಸ್ಕ ಹಾಕದೇ ವ್ಯಾಪಾರ ಮಾಡುವವರಿಗೆ ದಂಡ ಹಾಕಿದರೆ ಕೊನೆ ಪಕ್ಷ ದಂಡಕ್ಕಾದಾರೂ ಹೆದರಿ ಮಾಸ್ಕ ಹಾಕಿಕೊಳ್ಳಬಹುದು. ಇದು ಸರಿ ಅಲ್ಲವೇ….. ನೀವೇನಂತಿರಿ…..?