ಜುಲೈ 31ರಂದು ಪತ್ರಿಕಾ ದಿನಾಚರಣೆ

0
1637

ಕಲಬುರಗಿ, ಜುಲೈ. 30: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನಾಳೆ (31.7.2020) ರಂದು ಪತ್ರಿಕಾ ದಿನಾಚರಣೆಯನ್ನು ಆಚರಿಸಲಿದೆ.
ನಾಳೆ ಬೆಳಿಗ್ಗೆ 11.30 ಗಂಟೆಗೆ ನಗರದ ಜಿಲ್ಲಾ ಪಂಚಾಯ್ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸಾಮಾಜಿಕ ಅಂತರದೊAದಿಗೆ ವಿನೂತನ ಸರಳ ರೀತಿಯಲ್ಲಿ ಪತ್ರಿಕಾ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಬಿ. ಶರತ್, ಪೋಲಿಸ್ ಆಯುಕ್ತರಾದ ಸತೀಶಕುಮಾರ ಅವರುಗಳು ಆಗಮಿಸಲಿದ್ದು, ವಿಶೇಷ ಉಪನ್ಯಾಸವನ್ನು ಕಲಬುರಗಿ ಆಕಾಶವಾ ಣಿಯ ಸದಾನಂದ ಪೇರ್ಲಾ ಅವರು ನೀಡಲಿದ್ದಾರೆ.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾಧ ಭವಾನಿಸಿಂಗ್ ಮಾಣಿಕ ಸಿಂಗ್ ಠಾಕೂರ ಅವರು ವಹಿಸಲಿದ್ದಾರೆ ಎಂದು ಸಂಘದ ಪ್ರ. ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here