ಕೊರೊನಾಗೆ ಕಲಬುರಗಿ ಗಡಗಡ ಇಂದು 631 ಜನರಿಗೆ ಕೊರೊನಾ

0
1155

ಕಲಬುರಗಿ, ಜುಲೈ. 27: ಕೊರೊನಾ ಇದೊಂದು ಮಹಾಮಾರಿ. ಇದಕ್ಕೆ ಬಲಿಯಾಗಿದ್ದೆ ದೇಶದಲ್ಲಿ ಕಲಬುರಗಿ ಜಿಲ್ಲೆಯಲ್ಲಿ. ಮೊದ ಮೊದಲು ಒಂದAಕಿಯಲ್ಲಿ, ಬರುಬರುತ್ತ ಎರಡಂಕಿಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದ್ದು, ಇಂದು ದಾಖಲೆ 631 ಜನರಿಗೆ ಕೊರೊನಾ ಜಿಲ್ಲೆಯಲ್ಲಿ ವಕ್ಕರಿಸಿದ್ದು, ನೋಡಿದರೆ ಈ ಸಂಖ್ಯೆ ನಾಲ್ಕು ಸಂಖ್ಯೆಗೆ ಏರುವ ಸಾಧ್ಯತೆಗಳು ಹೆಚ್ಚಾಗತೊಡಗಿವೆ.
ಜಿಲ್ಲೆಯಲ್ಲಿ ಈವರೆಗಿನ ಇಂದಿನ ಸಂಖ್ಯೆ ದಾಖಲೆಯದ್ದಾಗಿದೆ. ಈ ಹಿಂದೆAದು ಇಷ್ಟು ಸಂಖ್ಯೆಯಲ್ಲಿ ಈ ಸೋಂಕು ಹರಡಿರಲಿಲ್ಲ.
ಜಿಲ್ಲೆಯಲ್ಲಿ ಈ ರೋಗಕ್ಕೆ ಇಂದು ಮಾಜಿ ಶಾಸಕ ರಾಜಾ ಮದನಗೋಪಾಲ ನಾಯಕ ಸೇರಿದಂತೆ 65 ಜನರು ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ನಿನ್ನೆಯಿಂದ 3864 ಸಂಖ್ಯೆ ಈಗ 4495 ಜನರಿಗೆ ಈ ಸೋಂಕು ತಗುಲಿದಂತಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಕರೊನಾ ಸೋಂಕು ಹರಡುವಿಕೆಗೆ ಹಲವಾರು ಕಾರಣಗಳು ವೈದ್ಯರು ನೀಡುತ್ತಿದ್ದು, ಹೆಚ್ಚು ಹೆಚ್ಚಾಗಿ ಕೊರೊನಾ ಪರೀಕ್ಷೆಗಳು ನಡೆಯದಿರುವುದು ಹಾಗೂ ಜನರು ಸಾಮಾಜಿಕ ಅಂತರದೊAದಿಗೆ ಹಲವಾರು ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ಈ ರೋಗ ಮತ್ತಷ್ಟು ಹೆಚ್ಚಾಗಿ ಹರಡಲು ಕಾರಣವಾಗಿದೆ ಎಂಬುದಾಗಿದೆ.

LEAVE A REPLY

Please enter your comment!
Please enter your name here