ಆಳಂದಲ್ಲಿ ಭಾರೀ ಮಳೆಗೆ ಬೈಕ್ ನೀರು ಪಾಲು, ಪ್ರಾಣಾಪಯದಿಂದ ಸವಾರ ಪಾರು

0
1121

ಆಳಂದ, ಜುಲೈ. 24: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೈಕ್ ಸವಾರ ನೀರಿನಲ್ಲಿ ಕೊಚ್ಚಿ ಹೋಗಿ ಮುಂದೆ ಹಡಲಗಿ ಬ್ರಿಡ್ಜ ಹತ್ತಿರ ನೀರಿನಲ್ಲಿ ಈಜಿಕೊಂಡು ದಡ ಸೇರಿದ ಘಟನೆ ಇಂದು ಮಧ್ಯಾಹ್ನ 2.30ರ ಸುಮಾರಿಗೆ ತಾಲೂಕಿನ ಹಡಲಗಿಯಲ್ಲಿ ಜರುಗಿದೆ.
ಸಾರ್ವಜನಿಕರು ಎಷ್ಟೆ ಬೇಡ ಅಂದರೂ ಕೂಡ ಕೇಳದೆ ಬೈಕ್ ಮೇಲೆ ಪ್ಲಾಸ್ಟಿಕ್ ಕೊಡಗಳನ್ನು ಇಟ್ಟುಕೊಂಡು ರಸ್ತೆ ದಾಟುವಾಗ ಈ ಘಟನೆ ನಡೆದಿದ್ದು, ಬೈಕ್ ಮತ್ತು ಕೊಡಗಳು ನೀರು ಪಾಲಾಗಿವೆ. ದೈವವಶಾತ ಬೈಕ್ ಸವಾರ ಬದುಕಿಳಿದು ದಡ ಸೇರಿದ್ದಾನೆ.

LEAVE A REPLY

Please enter your comment!
Please enter your name here