ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅರ್ಭಟ ಶುಕ್ರವಾರ 5000ಕ್ಕೂ ಹೆಚ್ಚು ಜನರಿಗೆ ಪಾಸೀಟಿವ್

0
1237

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಲಾಕ್‌ಡೌನ್ ತೆರವು ಮಾಡಿ ಒಂದೇ ಒಂದು ದಿನ ಕಳೆದಿದ್ದು, ಮತ್ತೇ ಕೊರೊನಾ ತನ್ನ ಅರ್ಭಟ ಮುಂದುವರೆಸಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5007ಕ್ಕೇರಿದ್ದ, ಇಲ್ಲಿಯವರೆಗೆ ರಾಜ್ಯದಲ್ಲಿ 85870 ಜನರಿಗೆ ಈ ರೋಗ ವಕ್ಕರಿಸಿದಂತಾಗಿದೆ.
ಕೋವಿಡ್-19 ಸೋಂಕಿನಿAದ ಇಂದು 110 ಜನ ಸಾವನ್ನಪ್ಪಿದ್ದು, ಇಲ್ಲಿಯವರೆಗೆ ರಾಜ್ಯದಾದ್ಯಂತ 1724 ಜನರು ಬಲಿಯಾಗಿದ್ದಾರೆ.
ಇಂದು ಆಸ್ಪತ್ರೆಯಿಂದ 2037 ಜನರು ಬಿಡುಗಡೆ ಸೇರಿದಂತೆ ಇಲ್ಲಿಯವರೆಗೆ 31347 ಜನರು ಗುಣಮುಖರಾಗಿದ್ದಾರೆ.
ಇಲ್ಲಿಯವರೆಗೆ ಒಟ್ಟು 52791 ಸಕ್ರೀಯ ಪ್ರಕರಣಗಳಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡA ತಾಗಿದೆ.
ಬೆಂಗಳೂರು ನಗರದ ಒಂದರಲ್ಲೇ ಇಂದು 50 ಜನರು ಪ್ರಾಣ ಕಳೆದುಕೊಂಡಿದ್ದು, ಉಳಿದಂತೆ ಕಲಬುರಗಿ, 5, ಮೈಸೂರಿನಲ್ಲಿ 6 ಜನ, ಉಡುಪಿ 3, ತುಮಕೂರಿನಲ್ಲಿ 5, ದಕ್ಷಿಣ ಕನ್ನಡದಲ್ಲಿ 6 ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಒಂದು, ಎರಡು ಸಾವು ಸಂಭವಿಸಿವೆ.
ಬೆಂಗಳೂರು ನಗರದಲ್ಲಿ 2267, ಮೈಸೂರು 281, ಉಡುಪಿ 190, ಬಾಗಲಕೋಟೆ 184, ದಕ್ಷಿಣ ಕನ್ನಡ 180, ಧಾರವಾಡ 174, ಕಲಬುರಗಿಯಲ್ಲಿ 159, ವಿಜಯಪುರ 158, ಬಳ್ಳಾರಿ 136, ಹಾಸನ 118, ಬೆಳಗಾವಿ 116, ಗದಗ 108, ರಾಯಚೂರು 107, ಚಿಕ್ಕಬಳ್ಳಾಪೂರ 92, ಉತ್ತರ ಕನ್ನಡ 88, ಬೀದರ 87, ದಾವಣಗೆರೆ 77, ಶಿವಮೊಗ್ಗೆ 67, ತುಮಕೂರು 59, ಹಾವೇರಿ 59, ಮಂಡ್ಯ 57, ಯಾದಗಿರಿ 53, ಕೊಪ್ಪಳ 39, ಕೋಲಾರ 36, ಚಾಮರಾಜನಗರ 33, ಚಿಕ್ಕಮಗಳೂರು 28, ಬೆಂಗಳೂರು ಗ್ರಾಮಾಂತರ 26, ಚಿತ್ರದುರ್ಗ 13, ರಾಮನಗರ 12, ಕೊಡಗು 3 ಮತ್ತು ಇತರೆ 36 ಕಡೆಗಳಲ್ಲಿ ಇಂದು ಪಾಸೀಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಹೊರಡಸಿದ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here