ಕಲಬುರಗಿ ಲಾಕ್‌ಡೌನ್ ಮತ್ತೆ ಒಂದು ವಾರ ವಿಸ್ತರಣೆ

0
2437

ಕಲಬುರಗಿ, ಜುಲೈ. ೧೯: ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಅವರು ಮತ್ತೆ ಒಂದು ವಾರ ವಿಸ್ತರಿಸಿ ಜಿಲ್ಲಾಧಿಕಾರಿಗಳಾದ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ದಿನಾಂಕ ೨೦.೭.೨೦೨೦ರಂದು ಈ ಲಾಕ್‌ಡೌನ್ ಆದೇಶ ಅಂತ್ಯವಾಗುವುದಿತ್ತು. ಆದರೆ ಮತ್ತೇ ಇಂದು ಮತ್ತೇ ಜಿಲ್ಲಾಧಿ ಕಾರಿಗಳು ಆದೇಶ ಹೊರಡಿಸಿ, ಬರುವ ದಿನಾಂಕ ೨೭.೦೭.೨೦೨೦ರ ವರೆಗೆ ಸಂಪೂರ್ಣ ಕಲಬುರಗಿ ಜಿಲ್ಲೆ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ.
ಅವಶ್ಯಕ ಸಾಮಾಗ್ರಿಗಳಾದ ಹಾಲು, ಹಣ್ಣು, ತರಕಾರಿ, ದಿನಸಿ ಅಂಗಡಿಗಳು ಪ್ರತಿದಿನ ಬೆಳಿಗ್ಗೆ ೬.೦೦ ರಿಂದ ಮಧ್ಯಾಹ್ನ ೨.೦೦ರ ವರೆಗೆ ಮಾತ್ರ ವ್ಯವಹಾರಿಸಲು ಸಮಯ ನಿಗದಿ ಮಾಡಲಾಗಿದೆ. ಅಲ್ಲದೇ ಬಾರ್ ಮತ್ತು ವೈನ್ಸ್ ಶಾಪೀಗಳು ನಗರ ಪ್ರದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಿಸಲ್ಪಟ್ಟವೆ. ನಗರದ ಪ್ರದೇಶ ಬಿಟ್ಟು ಗ್ರಾಮೀಣ ಭಾಗದಲ್ಲಿ ಎಂ.ಎಸ್.ಐ.ಎಲ್. ಮತ್ತು ವೈನ್ಸ್ ಶಾಪೀ ಗಳನ್ನು ತೆರೆಯಲು ಅನುಮತಿಸಲಾಗಿದೆ.
ಅಲ್ಲದೇ ಪೇಟ್ರೋಲ್ ಬಂಕ್‌ಗಳು ಕೂಡಾ ಬೆಳಿಗ್ಗೆ ೮.೦೦ ರಿಂದ ಮಧ್ಯಾಹ್ನ ೨.೦೦ ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here