ರಾಜ್ಯದಲ್ಲಿ ಶನಿವಾರ ಹೊಸದಾಗಿ 4537 ಕೊರೊನಾ ಪ್ರಕರಣಗಳ ದಾಖಲು

0
1276

ಬೆಂಗಳೂರು, ಜುಲೈ. 18: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ದಾಖಲೆ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳ ದಾಖಲಾಗುತ್ತಿದ್ದು, ಶನಿವಾರ 4537 ಜನರಿಗೆ ಮಾರಕ ರೋಗ ಕೊರೊನಾ ವಕ್ಕರಿಸಿದೆ.
ರಾಜ್ಯದಲ್ಲಿ ಈವರೆಗೆ ಸಕ್ರೀಯ ಕೊರೊನಾ ಪ್ರಕರಣಗಳ ಸಂಖ್ಯೆ 59652 ಆಗಿದ್ದು, ಇಂದು ಕೊರೊನಾ ಸೋಂಕಿಗೆ ಕರ್ನಾಟಕದಲ್ಲಿ 93 ಜನರು ಬಲಿಯಾಗಿದ್ದು, ಬೆಂಗಳೂರು ಒಂದರಲ್ಲೇ 49 ಜನರು ಸಾವನ್ನಪ್ಪಿದ್ದು, ಒಟ್ಟು ರಾಜ್ಯದಲ್ಲಿ ಈವರೆಗೆ 1240ಕ್ಕೆ ಏರಿದೆ.
ಬೆಂಗಳೂರಿನಲ್ಲಿ ಈವರೆಗೆ 631 ಮಂದಿ ಪ್ರಾಣ ಕಳೆದುಕೊಂಡರೆ, ಇಂದು 2521 ಸೋಂಕಿನ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದ್ದು, ಇವರೆಗೆ ಇಲ್ಲಿ 29629 ಆಗಿದೆ.

LEAVE A REPLY

Please enter your comment!
Please enter your name here