ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ

0
894
Bangalore May Have Another Lockdown If Numbers Increase, Hints ...

ಬೆಂಗಳೂರು, ಜುಲೈ. 17: ರಾಜ್ಯದಲ್ಲಿ ಮಾರಕ ಸೋಂಕು ಕೊರೊನಾಗೆ ಇಂದು 3693 ಜನರು ಸೋಂಕಿಗೆ ಗುರಿಯಾಗಿದ್ದು, ಈವರೆಗೆ 55115 ಮಂದಿಯ ಖಚಿತ ಪ್ರಕರಣಗಳು ದಾಖಲಾಗಿವೆ.\
ಇಂದು 3693 ಜನರು ಆಸ್ಪತ್ರೆ ಸೇರಿದತೆ 1028 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೆ ಒಟ್ಟು 20857 ಜನರು ಗುಣಮುಖರಾಗಿದಂತಾಗಿದೆ.
ಕೋವಿಡ್-19 ಸಕ್ರೀಯ ಪ್ರಕರಣಗಳ ಸಂಖ್ಯೆ 33205 ಆಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆ ಯಾಗುತ್ತಿದೆ.
ಇದರಿಂದಾಗಿ ರಾಜ್ಯದಲ್ಲಿ ಇನ್ನೊಂದು ವಾರ ಲಾಕ್‌ಡೌನ್ ಮುಂದುವರೆಸಿದರೆ ಈ ಸೋಂಕಿನ ಸಂಖ್ಯೆಯಲ್ಲಿ ಇಳಿಮುಖವಾಗುವ ಸಾಧ್ಯತೆಗಳಿವೆ.
ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಯಲ್ಲಿ 75 ಜನರು ಪ್ರಾಣ ಕಳೆದುಕೊಂಡಿದ್ದು, ರಾಜ್ಯದಲ್ಲಿ ಇಂದು 115 ಬಲಿ ಸೇರಿ ಒಟ್ಟು ಈವರೆಗೆ ಮಾರಕ ಕೊರೊನಾಗೆ 1147 ಜನರು ಸಾವಿಗೀಡಾಗಿದ್ದಾರೆ.
ಧಾರವಾಡದಲ್ಲಿ 8, ಮತ್ತು ಮೈಸೂರುನಲ್ಲಿ 7, ಬೆಳಗಾವಿ 4, ಉಡುಪಿ ಮತ್ತು ಬಳ್ಳಾರಿಯಲ್ಲಿ 3 ಮಂದಿ ಬಲಿಯಾಗಿದ್ದಾರೆ. ಉಳಿದಂತೆ ಹಲವಾರು ಜಿಲ್ಲೆಯಲ್ಲಿ ಒಂದೇರಡು ಪ್ರಕರಣಗಳಲ್ಲಿ ಸಾವನ್ನಪ್ಪಿದ್ದರೆ ಕಲಬುರಗಿಯಲ್ಲಿ ಇಂದು ಕೊರೊನಾಗೆ ಯಾವುದೇ ಸಾಹು ಸಂಭವಿಸಿಲ್ಲ
ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 2208 ಪ್ರಕರಣಗಳು ವರದಿಯಾದರೆ ಅತೀ ಕಡಿಮೆ ಯಾದಗಿರಿಯಲ್ಲಿ 4 ಕೊರೊನಾ ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಧಾರವಾಡ 157, ಬಳ್ಳಾರಿ 133, ವಿಜಯಪುರ 118, ಬೆಳಗಾವಿ 95, ಮೈಸೂರು 93, ಕಲಬುರಗಿ 89, ಉಡುಪಿ 80, ಉತ್ತರ ಕನ್ನಡ 75, ಬೀದರ 69. ಗದಗ 59, ಹಾವೇರಿ 58, ಕೋಲಾರ 51, ದಕ್ಷಿಣ ಕನ್ನಡ 39, ತುಮಕೂರು 36, ರಾಯಚೂರು 33, ಬೆಂಗಳೂರು ಗ್ರಾಮಾಂತರ 33, ದಾವಣಗೇರೆ 31, ಚಿಕ್ಕಬಳ್ಳಾಪೂರ 31, ಕೊಪ್ಪಳ 30, ಬಾಗಲಕೋಟೆ 29, ಚಿಕ್ಕಮಗಳೂರು 28, ಚಿಕ್ಕಮಗಳೂರು 28, ಚಿತ್ರದುರ್ಗ 24, ಮಂಡ್ಯ 22, ಹಾಸನ 21, ರಾಮನಗರ 14, ಕೊಡಗು 13, ಶಿವಮೊಗ್ಗ 10, ಚಾಮರಾಜನಗರ 10, ಯಾದಗಿರಿ 4 ಮತ್ತು ಇತರೆ 36 ಕೊರೊನಾ ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here