ಕಲಬುರಗಿ, ಜುಲೈ. 15: ಸರಕಾರ ಕೊರೊನಾ ನಿಯಂತ್ರಣಕ್ಕೆ ಹೊರಡಿಸಿದ ಲಾಕ್‌ಡೌನ್ ಬರೀ ಸರಕಾರದ ಲಾಕ್‌ಡೌನ್ ಆಗದೆ ಸ್ವಯಂಪ್ರೇರಿತವಾಗಿ ಸಾರ್ವಜನಿಕರು ತಮ್ಮನ್ನು ತಾವು ಲಾಕ್‌ಮಾಡಿಕೊಂಡು ಯಾರೂ ಕೂಡಾ ಮನೆಯಿಂದ ಹೊರಗಡೆ ಬರದೆ ಸ್ಟೇಹೋ, ಸೇಫ್ ಹೋಂ ಗೆ ಶರಣಾಗಿದ್ದಾರೆ ಎಂದು ಮಾಜಿ ಮಹಾಪೌರ ಹಾಗೂ ಕಾಂಗ್ರೆಸ್ ಧುರೀಣ ಶರಣಕುಮಾರ ಎಂ. ಮೋದಿ ಅವರು ಹೇಳಿದ್ದಾರೆ.
ಶೇ. 100ಕ್ಕೆ 90%ರಷ್ಟು ಲಾಕ್‌ಡೌನ್ ಆಗಿದ್ದು, ಇದಕ್ಕೆ ಕಾರಣ ಜನರು ಎಚ್ಚೆತ್ತು ಸ್ವಯಂಪ್ರೇರಿತವಾಗಿ ತಮ್ಮ ತಮ್ಮ ಮನೆಯ ವೃದ್ಧರ ಹಾಗೂ ಚಿಕ್ಕಮಕ್ಕಳ ಆರೋಗ್ಯವನ್ನು ಕಾಪಾ ಡುವ ದೃಷ್ಟಿಯಿಂದ ಲಾಕ್‌ಡೌನ್ ಮಾಡಿಕೊಂಡಿದ್ದು, ಮುಂಚಿನ 3.0 ಲಾಕ್‌ಡೌನ್ ಸರಕಾರದ ಲಾಕ್‌ಡೌನ್ ಆಗಿತ್ತು ಈಗಿನ 4.0 ಲಾಕ್‌ಡೌನ್ ಸಾರ್ವಜನಿಕರ ಲಾಕ್‌ಡೌನ್ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಕಡ್ಡಾಯವಾಗಿ ಮನೆಯಿಂದ ಹೊರಗಡೆ ಅಥವಾ ಜನರೊಂದಿಗೆ ಬೆರೆಯುವ ಸಮಯದಲ್ಲಿ ಮುಖಕ್ಕೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರದೊAದಿಗೆ ಜಾಗ್ರಕತೆಯಿಂದ ವ್ಯವಹರಿಸಬೇಕು, ಸಿಕ್ಕ ಸಿಕ್ಕ ವಸ್ತುಗಳನ್ನು ಮುಟ್ಟದೆ, ಅವಶ್ಯಕತೆ ಇದ್ದರೆ ಅಷ್ಟೇ ಮನೆಯಿಂದ ಹೊರಡ ಬೇಕು. ಆಗಾಗ ಸೋಪು ಇಲ್ಲವೆ ಹ್ಯಾಂಡ್‌ವಾಶದಿAದ ಕೈ ತೊಳೆಯುವ ಮೂಲಕ ಶುಚಿತ್ವ ಕಾಪಾಡುವುದರೊಂದಿಗೆ ತಮ್ಮ ಹಾಗೂ ತಮ್ಮ ಮನೆಯವರೆಗೆ ಆರೋಗ್ಯ ಕಾಪಾಡಿ ಈ ಕೊರೊನಾ ಸೋಂಕಿನ ವಿರುದ್ಧ ಸಾರಿರುವ ಯುದ್ಧದಲ್ಲಿ ಜಯಶಾಲಿಗಳಾಗಿ, ಆರೋಗ್ಯವಂತರಾಗಿ ಬಾಳಬೇಕೆಂದು ಅವರು ಹಾರೈಸಿದ್ದಾರೆ.