ಕಲಬುರಗಿ, ಜು. ೦೭-ಕಲಬುರಗಿ ಜಿಲ್ಲಾ ಪಂಚಾಯತ್‌ಗೂ ಕೊರೊನಾ ವಕ್ಕರಿಸಿದ್ದು, ಅಲ್ಲಿ ಕೆಲಸ ಮಾಡುತ್ತಿರುವ ಡಿಗ್ರೂಪ್ ನೌಕರರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದರಿಂದಾಗಿ ಇಡೀ ಜಿಲ್ಲಾ ಪಂಚಾಯತ್ ಸೀಲ್‌ಡೌನ್ ಮಾಡಲಾಗಿದೆ.
ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ವರದಿಯಾಗಿದ್ದು, ಬೆಳಿಗ್ಗೆಯಿಂದ ಕಛೇರಿ ಸೀಲ್‌ಡೌನ್ ಮಾಡಿದ್ದು, ಎಲ್ಲಡೆ ಸ್ಯಾನಿಟೈಸರ್ ಸಿಂಪಡಿಲಾಗಿದೆ.
ಮಂಗಳವಾರ ಬೆಳಿಗ್ಗೆ ಕಚೇರಿ ಸೀಲ್‌ಡೌನ್ ಮಾಡಲಾಗಿದೆ ಎಂದು ನಮ್ಮ ಪ್ರತಿನಿಧಿ ವರದಿಮಾಡಿದ್ದಾರೆ.