ಮಾತಾ ಮಾಣಿಕೇಶ್ವರಿ ಜಯಂತಿ ಸರಕಾರ ಆಚರಿಸಲು ಕೂಡಿ ಆಗ್ರಹ

0
883

ಕಲಬುರಗಿ, ಜು. 4: ಅಹಿಂಸೋ ಪರಮೋಧರ್ಮ ಎನ್ನುವ ನಂಬಿಕೆಯಲ್ಲಿ ಕಲಿಯುಗದಲ್ಲಿ ಅನೇಕ ಪವಾಡಗಳನ್ನು ಮಾಡುವ ಮೂಲಕ ಭಕ್ತಾದಿಗಳ ಮನೋಕಾಮನೆ ವರವನ್ನು ನೀಡಿದ ಕಲಿಯುಗದ ದೇವರೆಂದೆ ಜಗತ್ತಿಗೆ ಪ್ರಖ್ಯಾತಿ ಪಡೆದಿರುವ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರ ಜಯಂತಿ ನಾಳೆ ದಿನಾಂಕ 5.07.2020ರಂದು ಇದ್ದು, ಆದರೆ ಈಗ ಪ್ರಸ್ತುತ ಮಾರಕ ರೋಕ ಕೊರೊನಾ ಇರುವುದರಿಂದ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲು ಸಾಧ್ಯವಿಲ್ಲ. ಕಾರಣ ಮುಂದಿನ ದಿನಗಳಲ್ಲಿ ಅಮ್ಮನವರ ಜಯಂತಿಯನ್ನು ಸರಕಾರವೇ ಆಚರಿಸಬೇಕೆಂದು ಕಲ್ಯಾಣ ಕರ್ನಾಟಕ ಕೋಲಿ ಸಮಾಝದ ಅಧ್ಯಕ್ಷರಾದ ಶಾಂತಪ್ಪ ಎ. ಕೂಡಿ ಅವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಈಗಾಗಲೇ ಈ ಜಯಂತಿಯನ್ನು ಸರಕಾರದಿಂದ ಆಚರಿಸಲು ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿ ಯೂರಪ್ಪ ಹಾಗೂ ಕೇಂದ್ರದ ಗೃಹ ಸಚಿವರಾದ ಅಮೀತ ಶಹಾ ಅವರಿಗೆ ಪತ್ರದ ಮೂಲಕ ಬರೆದು ಒತ್ತಾಯಿಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಅಲ್ಲದೇ ಖಾಸಗಿ ಸಂಘ ಸಂಸ್ಥೆಗಳಲ್ಲಿಯೂ ಆಚರಿಸಲು ಸರಕಾರ ಆದೇಶ ಹೋರಡಿಸಿಸಬೇಕೆಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here