ಶನಿವಾರ ರಾಜ್ಯಕ್ಕೆ ಶನಿ (ಕೊರೊನಾ) ಕಾಟ 1839 ಹೊಸ ಕೊರೊನಾ ಪ್ರಕರಣಗಳ ದಾಖಲು

    0
    972

    ಬೆಂಗಳೂರು, ಜುಲೈ 4: ರಾಜ್ಯದಲ್ಲಿ ಶನಿವಾರ 1839 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈವರೆಗೆ 21540 ಆಗಿದ್ದು, 11966 ಸಕ್ರೀಯ ಪ್ರಕರಣಗಳಿವೆ. 42 ಜನರು ಈ ಮಾರಕ ರೋಗಕ್ಕೆ ಬಲಿಯಾಗಿದ್ದು, ಒಟ್ಟು 335 ಮಂದಿ ಈವರೆಗೆ ಮೃತ ಪಟ್ಟಿದ್ದಾರೆ.
    ಇಂದು 439 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಒಟ್ಟು 9244 ಜನರು ಈ ರೋಗದಿಂದ ಮುಕ್ತಿಪಡೆದು ಗುಣಮುಖರಾಗಿ ಮನೆಗೆ ಸೇರಿದಂತಾಗಿದೆ.
    226 ಜನರು ಈ ರೋಗಕ್ಕೆ ತುತ್ತಾಗಿ ತೀವ್ರ ನಿಗಾ ಘಕಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    ಬೆಂಗಳೂರು ನಗರದಲ್ಲಿಯೇ ಇಂದು 1172 ಜನರು ಈ ರೋಗಕ್ಕೆ ತುತ್ತಾಗಿದ್ದು, ನಂತರ ಸ್ಥಾನ ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳದ್ದಾಗಿದ್ದೆ. ಇಲ್ಲಿ ಕ್ರಮವಾಗಿ 75, 73 ಪ್ರಕರಣಗಳಿ ದ್ದರೆ ಧಾರವಾಡದಲ್ಲಿ 45, ರಾಯ ಚೂರಿನಲ್ಲಿ 41, ಮೈಸೂ ರು 38, ಕಲಬುರಗಿ ಮತ್ತು ವಿಜ ಯಪುರ ಸಮನಾಗಿ 37, ಮಂಡ ಮತ್ತು ಉತ್ತರ ಕನ್ನಡದಲ್ಲಿ ತಲಾ 35 ಪ್ರಕರಣಗಳು ಇದ್ದರೆ ಶಿವ ಮೋಗ್ಗದಲ್ಲಿ 31, ಹಾವೇರಿ 28, ಬೆಳಗಾಂವಿ 27, ಹಾಸನ 25, ಉಡುಪಿ 18, ಚಿಕ್ಕಬಳ್ಳಾಪುರ 12 ತುಮಕೂರ 12, ಬೆಂಗಳೂರು ಗ್ರಾಮಾಂತರ 11, ಕೋಲಾರ 11 ಸೇರಿದಂತೆ ಇನ್ನು ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಒಂದ ಕ್ಕಿಯಲ್ಲಿ ಪ್ರಕರಣಗಳು ದಾಖ ಲಾಗಿವೆ ಎಂದು ಆರೋಗ್ಯ ಇಲಾಖೆ ಹೊರಡಸಿದ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

    LEAVE A REPLY

    Please enter your comment!
    Please enter your name here