ಬೆಂಗಳೂರು, ಜೂ. 29: ರಾಜ್ಯದಲ್ಲೇಡೆ ಏರುತ್ತಿರುವ ಕೊರೊನಾ ಪ್ರಕರಣಗಳ ಹತೋಟಿಗೆ ತರಲು ಸರಕಾರಕ್ಕೆ ಇರುವುದು ಒಂದೇ ಉಪಾಯ ಲಾಕ್‌ಡೌನ್.
ಈ ಕುರಿತಂತೆ ಸರಕಾರ ಈಗಾಗಲೇ ರಾಜ್ಯದ ಎಲ್ಲಡೆ ರಾತ್ರಿ ಕರ್ಫ್ಯೂವನ್ನು ರಾತ್ರಿ 8 ರಿಂದ ಬೆಳಿಗ್ಗಿನ 5ರ ವರೆಗೆ ಜಾರಿ ಮಾಡಿದ್ದು ಅಲ್ಲದೇ ರವಿವಾರದಂದು ಸಂಪೂರ್ಣ ಲಾಕ್‌ಡೌನ್ ಘೋಷಣೆಯನ್ನು ಬರುವ ರವಿವಾರದಿಂದ ಮಾಡಿದೆ.
ಈದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಸರಕಾರ ಜುಲೈ 7 ರಿಂದ ರಾಜ್ಯದಲ್ಲಿ ಎಲ್ಲಡೆ ಇನ್ನಷ್ಟು ಲಾಕ್‌ಡೌನ್ ಬಿಗಿಗೊಳಿಸಲು ಯೋಚಿಸಿದ್ದು, ಮುಂದಿನ ಜುಲೈ, ಅಗಸ್ಟ ಎರಡು ತಿಂಗಳು ಕಠಿಣ ಲಾಕ್‌ಡೌನ ಎದುರಿಸಲು ಜನತೆ ಸಜ್ಜಾಗಬೇಕಾಗಿದೆ.