ಬೆಂಗಳೂರು, ಜೂ.23- ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣ ಹಾಗೂ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಜನಸಾಮಾನ್ಯರು ಸರಕಾರದ ಮಾರ್ಗಸೂಚಿಗಳನ್ನು ಮಾಸ್ಕ್ ಇಲ್ಲದೇ ಸೈನಿಟೈಜರ್ ಹೆಚ್ಚಾಗಿ ಉಪಯೊಗಿಸದೇ ನಿರ್ಲಕಷ್ಯ ವಹಿಸುತ್ತಿದ್ದು ಈ ಹಿಂದೆ ವಿಧಿಸಲಾಗಿದ್ದ ಲಾಕ್‌ಡೌನ್ ನಿಬಂಧನೆಗಳನ್ನು ಮುಂದುವರೆಸಲು ಸರ್ಕಾರ ಚಿಂತನೆ ನಡೆಸಿದೆ.
ರಾಜಧಾನಿ ಬೆಂಗಳೂರು, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ನಿಬಂಧನೆಗಳನ್ನು ಪುನಃ ವಿಧಿಸಲು ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಸೂಚನೆಯನ್ನು ಜನರು ಗಾಳಿಗೆ ತೂರುತ್ತಿದ್ದು, ಎಲ್ಲೆಂದರಲ್ಲೆ ಗುಟ್ಕಾ, ತಂಬಾಕು ತಿಂದು ಉಗುಳುವುದು. ಧೂಮಪಾನ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವುದು ಅಲ್ಲದೇ ಹಲವಾರು ಕಡೆ ಸರಕಾರ ನಿಯಮಗಳು ಕಾಗದಲ್ಲಿ ಮಾತ್ರ ಸಿಮೀತವಾಗಿದ್ದು, ಆಚರಣೆಯಲ್ಲಿ ಬಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ತನ್ನ ಅಟ್ಟಹಾಸ ಮರೆಯುತ್ತಿದೆ. ಇದಕ್ಕೆ ಮಟ್ಟ ಹಾಕಲು ಮತ್ತೇ ಲಾಕ್‌ಡೌನ್ ಒಂದೆ ಸೂಕ್ತ ಮಾರ್ಗವೆಂಬAತೆ ಸರಕಾರ ನಿರ್ಧಾರಕ್ಕೆ ಬಂದು ಈ ಲಾಕ್‌ಡೌನ್ ಜಾರಿಗೆ ಚಿಂತನೆ ನಡೆಸಿದೆ.
Good Journalism.