ಕೊರೊನಾಗೆ ರಾಜ್ಯದಲ್ಲಿ ಇಂದು 8 ಜನರು ಆಹುತಿ

0
955
Computer image of a coronavirus

ಬೆಂಗಳೂರು, ಜೂನ್. ೧೭: ರಾಜ್ಯದಲ್ಲಿ ಕಳೆದ ೨೪ ಗಂಟೆಗಳಲ್ಲಿ (ಬುಧುವಾರ) ವಿವಿಧ ಜಿಲ್ಲೆಗಳಿಂದ ಒಟ್ಟು ೨೦೪ ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೊರೊನಾ ರೋಗಕ್ಕೆ ಇಂದು ೮ ಮಂದಿ ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ ೧೦೨ಕ್ಕೆ ಏರಿದೆ.
ನಿನ್ನೆಯಿದ್ದ ಒಟ್ಟು ೭೫೩೦ ಪ್ರಕರಣಗಳು ಇಂದು ೭೭೩೪ಕ್ಕೆ ಏರಿದಂತಾಗಿದೆ.
ಐಸಿಯುನಲ್ಲಿ ಚಿಕತ್ಸೆ ಪಡೆಯುವ ರೋಗಿಗಳ ಸಂಖ್ಯೆ ೭೨ ಆಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು ೩೪೩ ಆದರೆ ಒಟ್ಟು ಈ ವರೆಗೆ ಬಿಡುಗಡೆಯಾದವರು ೪೮೦೪ ಆಗಿದ್ದು, ೨೮೨೪ ಸಕೀಯ ಪ್ರಕರಣಗಳು ಇವೆ.
ಅತೀ ಹೆಚ್ಚು ಬೆಂಗಳೂರು ನಗರ ೫೫, ಯಾದಗಿರಿ ೩೭, ಬಳ್ಳಾರಿ ೨೯, ಕಲಬುರಗಿ ೧೯, ಬೀದರ ೧೨, ದಕ್ಷಿಣ ಕನ್ನಡ ಮತ್ತು ಧಾರ ವಾಡಗಳಲ್ಲಿ ತಲಾ ೮ ಪ್ರಕರಣಗಳು, ದಾಖಲಾ ದರೆ ಹಾಸನ ೫, ಉಡುಪಿ, ಬಾಗಲಕೋಟೆ, ಶಿವಮೊಗ್ಗಗಳಲ್ಲಿ ೪ ಜನರನ್ನು ಕೊರೊನಾ ತನ್ನಗೆ ತೆಕ್ಕಗೆ ಸೆಳೆದಿದೆ. ಚಿಕ್ಕಬಳ್ಳಾಪೂರ ೩, ಉತ್ರರ ಕನ್ನಡ ೩, ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ತಲಾ ೧ ಪ್ರಕರಣ ಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here