ಅರುಣಕುಮಾರ ಹೇಳಿಕೆ ಕಾಂಗೈನ ಗುಂಡಾ ಸಂಸ್ಕೃತಿ ತೋರಿಸುತ್ತದೆ:ರದ್ದೇವಾಡಗಿ

0
1084

ಕಲಬುರಗಿ, ಜೂ. ೧೩: ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡಿದರೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದು ಹೇಳಿರುವುದು ಕಾಂಗ್ರೆಸ್‌ನ ಗುಂಡಾ ಸಂಸ್ಕೃತಿ ಎತ್ತಿತೋರಿಸುತ್ತದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಅವರು ಹೇಳಿದ್ದಾರೆ.
ಅವರಿಂದಿಲ್ಲಿ ಪತ್ರಿಕಾಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ ಇಂತಹ ಹೇಳಿಕೆ ಸಂಸ್ಕೃತಿ ಇಲ್ಲದ ವ್ಯಕ್ತಿಯಿಂದ ಬರುವುದು ಸಹಜ, ಅಸಂವಿಧಾನಿಕ ಪದ ಬಳಸಿ ಟೀಕೆ ಮಾಡುವುದು ಆರೋಗ್ಯಕರ ರಾಜಕರಣದ ಲಕ್ಷಣವಲ್ಲ ಎಂದು ನುಡಿದ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನಾರ್ಹವಾಗಿದೆ ಎಂದರು.
ಮಾಜಿ ಸಚಿವ ಹಾಗೂ ಬಿಜೆಪಿ ಧುರೀಣ ಮಾಲೀಕಯ್ಯ ಗುತ್ತೇದಾರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಬಲವಾಗಿ ಪಕ್ಷವು ಖಂಡಿಸುತ್ತದೆ ಅಲ್ಲದೇ ಅವರು ಮಾಡಿದ ಆರೋಪಗಳೆಲ್ಲವು ನಿರಾಧಾರವಾಗಿವೆ ಎಂದು ನುಡಿದರು.
ಮಾಲೀಕಯ್ಯ ಗುತ್ತೇದಾರ ಅವರು ಖರ್ಗೆ ಅವರ ಆಶೀರ್ವಾದದಿಂದ ರಾಜಕೀಯದಲ್ಲಿ ಬಂದಿದ್ದಾರೆ ಎಂಬ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಗುತ್ತೇದಾರ ಅವರು ತಮ್ಮ ಕೋಮಿನ ಅಲ್ಪಮತಗಳ ನಡುವೆಯೂ ತಮ್ಮ ವರ್ಚಸ್ಸು ಹಾಗೂ ಜನರ ಪ್ರೀತಿಯಿಂದ ಕಾಂಗ್ರೆಸ್, ಜೆಡಿಎಸ್, ಕೆಸಿಪಿ ಪಕ್ಷಗಳಿಂದ ನಿಂತು ಚುನಾವಣೆಯಲ್ಲಿ ೬ ಬಾರಿ ಶಾಸಕರಾಗಿ ಆಯ್ಕೆ ಯಾಗಿರುವುದು ಕ್ಷೇತ್ರದ ಹಾಗೂ ಜಿಲ್ಲೆಯ ಜನತೆಗೆ ಗೋತ್ತಲ್ಲದ ಸಂಗತಿಯೇನಲ್ಲ. ನೇರ ನುಡಿಯ ಹಿರಿಯ ಮುತ್ಸದ್ದಿ ರಾಜಕಾರಣಿಯ ಬಗ್ಗೆ ಅರುಣಕುಮಾರ ಅವರು ಟೀಕೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರೇ ಅವಲೋಕನ ಮಾಡಿಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಎಸ್. ಗುತ್ತೇದಾರ, ಹಣಮಂತರಾವ ಮಾಲಾಜಿ ಅವರು ಉಪಸ್ಥಿ ತರಿದ್ದರು.

LEAVE A REPLY

Please enter your comment!
Please enter your name here