ಕಲಬುರಗಿ, ಜೂ. 11: ಹಿರಿಯ ಹಾಗೂ ಶೂದ್ರಶಕ್ತಿ ದಿನಪತ್ರಿಕೆಯ ಸಂಪಾದಕರಾದ ಬಿ. ವ್ಹಿ. ಚಕ್ರವರ್ತಿಯವರನ್ನು ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆಮಾಡಲಾಗಿದೆ.
ಇತ್ತಿಚೇಗೆ ತುಮೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಸುಮಾರು 113ಕ್ಕೂ ಅಧಿಕ ರಾಜ್ಯದ ವಿವಿಧ ಜಿಲ್ಲೆಗಳ ಸಂಪಾದಕರು ಭಾಗವಹಿಸಿದ್ದ ಸಭೆಯಲ್ಲಿ ಚಕ್ರವರ್ತಿಯವರ ಹೆಸರನ್ನು ಹಿರಿಯ ಪತ್ರಕರ್ತ ನೃಪತುಂಗ ಪತ್ರಿಕೆಯ ಸಂಪಾದಕರಾದ ಶಿವರಾಯ ದೊಡ್ಡಮನಿ ಅವರು ಸೂಚಿಸಿದರು. ಸಂಘದ ರಾಜ್ಯಾಧ್ಯಕ್ಷರು ಸೇರಿದಂತೆ ಸಭೆಯಲ್ಲಿ ಇದ್ದ ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಹೈದ್ರಾಬಾದ ಕರ್ನಾಟಕ ಮುಂಜಾವು ಪತ್ರಿಕೆಯ ಸಂಪಾದಕರಾದ ಶಾಮಕುಮಾರ ಸಿಂಧೆ ವಿ. ವಿ. ದೇಸಾಯಿ ಸೇರಿದಂತೆ ಇನ್ನು ಹಲವಾರು ಪತ್ರಕರ್ತರು ಭಾಗವಹಿಸಿದ್ದರು.
ಅಭಿನಂದನೆ:
ಕಲಬುರಗಿ ಜಿಲ್ಲಾ ಸಂಪಾದಕರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಬಿ. ವ್ಹಿ. ಚಕ್ರವರ್ತಿ ಅವರನ್ನು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧ್ಯಕ್ಷರಾದ ರಾಜು ದೇಶಮುಖ ಅವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಸಂಘದಲ್ಲಿ ಮಾಧ್ಯಮ ಪಟ್ಟಿಯಲ್ಲಿ ಸೇರದ ಪತ್ರಕರ್ತರನ್ನು ಸಹ ಸೇರ್ಪಡೆಮಾಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನೂತನ ಅಧ್ಯಕ್ಷರು ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಹೇಳಿದರು.