ಆನೆ ಹೋಗುವಾಗ ಶ್ವಾನ ಬೊಗಳಿದಂತೆ ಮಾಲೀಕಯ್ಯಗೆ ಪಾಟೀಲ್ ಟಾಂಗ್

    0
    1141

    ಕಲಬುರಗಿ, ಜೂನ್. ೧೧: ಬಿಜೆಪಿಗೆ ದೇಶದಲ್ಲೇ ಸವಾಲಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಟೀಕೆ ಮಾಡಿದ್ದು “ಆನೆ ಹೋಗುವಾಗ ಶ್ವಾನ ಬೊಗಳಿದಂತೆ” ಮಾಲಿಕಯ್ಯ ಗುತ್ತೇದಾರ ಅವರಿಗೆ ಜಿಲ್ಲಾ ಪಂಚಾಯತ್ ಸದಸ್ಯ ಅರುಣಕುಮಾರ ಪಾಟೀಲ್ ಟಾಂಗ್ ನೀಡಿದ್ದಾರೆ.
    ಅವರಿಂದಿಲ್ಲಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಖರ್ಗೆ ಅವರಿಂದಲೇ ರಾಜಕೀಯ ಜೀವನ ಪಡೆದ ಮಾಲೀಕಯ್ಯ ಗುತ್ತೇದಾರ ಅವರು ಕೂಡಾ ಹಿರಿಯ ರಾಜಕಾರಣಿಯೇ ಆಗಿದ್ದಾರೆ, ಹೀಗಿದ್ದು, ಖರ್ಗೆ ಅವರ ಬೇಕಾಬಿಟ್ಟಿ ಹೇಳಿಕೆಗಳನ್ನು ಹೇಳುವುದನ್ನು ನಿಲ್ಲಿಸದಿದ್ದರೆ, ಖರ್ಗೆ ಅವರ ಅಭಿಮಾನಿಗಳಿಗೆ ಗುತ್ತೇದಾರ ಅವರಿಗೆ ಮುಂದೊAದು ದಿನ ಪಾಠ ಕಲಿಸಲಿದ್ದಾರೆ ಎಂದರು.
    ಗುತ್ತೇದಾರ ಅವರಿಗೆ ರಾಜಕೀಯ ಜನ್ಮ ನೀಡದಿದ್ದರೆ ಇಂದು ಗುತ್ತೇದಾರ ಮದ್ಯದಂಗಡಿಯೇ ಕಾಯುವ ಕೆಲಸ ಮಾಡಬೇಕಾಗಿತ್ತು, ಇದನ್ನು ತಪ್ಪಿಸದವರೇ ಖರ್ಗೆಜೀಯವರು.
    ಖರ್ಗೆ ಅವರಿಗೆ ಬೆಂಗಾವಲಿಗಾಗಿ ಇಡೀ ದೇಶವೇ ಇರುವಾಗ ಆವರಿಗೆಕೆ ಪೋಲಿಸ್ ಬೆಂಗಾವಲು, ಅವರು ಇದನ್ನು ಯಾವಾಗಲು ಒಪ್ಪುವುದಿಲ್ಲ ಎಂದರು.
    ಈ ಹಿಂದೆ ಸುಮಾರು ೪೦ ಕೊಲೆ ಪ್ರಕರಣಗಳಲ್ಲಿ ಗುತ್ತೇದಾರ ಭಾಗಿಯಾಗಿದ್ದಾರೆ ಇದರ ಮುಂದಿನ ದಿನಗಳಲ್ಲಿ ಅವರು ಮಾಡಿದ ಹಲವಾರು ಅಕ್ರಮ ಕೆಲಸಗಳಿಗೆ ಸಾಕ್ಷಿ ಸಮೇತ ನೀಡುವೆ ಎಂದರು.
    ಇನ್ನೊರ್ವ ಜಿ.ಪಂ. ಸದಸ್ಯೆ ಶ್ರೀಮತಿ ಶೋಭಾ ಸಿದ್ದು ಸಿರಸಗಿ, ಅವರು ಕೂಡಾ ಪತ್ರಿಕಾ ಗೊಷ್ಠಿಯಲ್ಲಿ ಹಾಜರಿದ್ದರು.

    LEAVE A REPLY

    Please enter your comment!
    Please enter your name here