ಕಲಬುರಗಿ, ಜೂನ್. 10: ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಚಿತ್ತಾಪೂರ ಮತಕ್ಷೇತ್ರದ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು, ಇಂತಹ ಬೆದರಿಕೆಗಳಿಗೆ ಅವರು ಹೆದರಲ್ಲ, ಕೊಲೆ ಬೆದರಿಕೆ ಹಾಕಿದವರನ್ನು ಕೂಡಲೇ ಪತ್ತೆ ಹಚ್ಚಬೇಕೆಂದು ಮಾಜಿ ಸಚಿವ ಬಾಬುರಾವ ಚವ್ಹಾಣ ಅವರು ಆಗ್ರಹಿಸಿದ್ದಾರೆ.
ಜಿಲ್ಲೆಯ ಸಂಸದರಾದ ಉಮೇಶ ಜಾಧವರ ಅವರ ಕಾರ್ಯವೈಖರಿಗೆ ಬಗ್ಗೆ ಟೀಕಿಸಿದ ಅವರು ಅವರೊಬ್ಬ ಕೆಟ್ಟ ಎಂ.ಪಿ. ಎಂದು ಬಣ್ಣಿಸುವ ಮೂಲಕ ಜಾಧವ ಅವರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲ್ಲ ಎಂದರು.
ಇನ್ನು ಮಲ್ಲಿಕಾರ್ಜುನ್ ಖರ್ಗೆಗೆ ಜೀವ ಬೆದರಿಕೆ ವಿಚಾರಕ್ಕೆ ಸಂಬAಧಿಸಿದAತೆ ಮಾತನಾಡಿದ ಅವರು, ಖರ್ಗೆ ನಮ್ಮ ಹಿರಿಯ ನಾಯಕರು. ಲೋಕಸಭೆಯಲ್ಲಿ ಕೇಂದ್ರದ ದುರಾಡಳಿತ ಎತ್ತಿಹಿಡಿದವರು. ರಾಜ್ಯಸಭೆಗೆ ಹೋಗೋದು ಇಷ್ಟವಿಲ್ಲ ಅನ್ನಿಸುತ್ತೆ. ಅದಕ್ಕೆ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ತನಿಖೆಯನ್ನು ಮಾಡಬೇಕು. ಇಲ್ಲದಿದ್ದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.