ನಗರದಲ್ಲಿ ರಾಜಾರೋಷವಾಗಿ ಗುಟ್ಕಾ, ಸಿಗರೇಟ್ ಮಾರಾಟ

0
917

ಕಲಬುರಗಿ, ಜೂನ್. 10: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿ ಮಾರ್ಗಸೂಚಿಯಲ್ಲಿ ಗುಟ್ಕಾ, ಸಿಗರೇಟ್‌ಗೆ ಕಡಿವಾಣ ಹಾಕಿ, ಎಲ್ಲೆಂದರಲ್ಲಿ ಉಗುಳಿದರೆ 200 ರಿಂದ 500 ರೂ. ವರೆಗೆ ದಂಡ ವಿಧಿಸುವ ಷರತ್ತು ವಿಧಿಸಿತ್ತು.
ಆದರೆ ಕಲಬುರಗಿ ನಗರದಲ್ಲಿ ಅನ್‌ಲಾಕ್ 01ರಲ್ಲಿ ಜೂನ್ 8ರಿಂದ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶ ಕಲ್ಪಿಸಿದ ಬೆನ್ನೆಲ್ಲೆ ತಂಬಾಕು, ಗುಟ್ಕಾ, ಖೇನಿ ಹಾಗೂ ಸಿಗರೇಟ್ ಮಾರಾಟದ ಅಂಗಡಿ ಗಳು ಕೂಡಾ ಬಹುತೇಕ ಕಡೆ ತೆರೆದಿದ್ದು, ರಾಜಾರೋಷವಾಗಿ ಸಿಗರೇಟ್ ಹಾಗೂ ಗುಟ್ಕಾ, ತಂಬಾಕು ಮಾರಾಟದಲ್ಲಿ ತೊಡಗಿವೆ.
ರಾಜ್ಯದಲ್ಲಿ ದಿನೇ ದಿನೆ ಕರೊನಾ ಪ್ರಕರಣಗಳು ಹೆಚ್ಚಾಗತೊಡಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಈ ರೋಗ, ಸಾರ್ವಜನಿಕರಿಗೆ ಗುಟ್ಕಾ ಸೇವಿಸಿ ಉಗುಳುವರಿಂದ ಬಹಳ ಕಿರಿಕಿರಿ ಉಂಟುಮಾಡುತ್ತ ದಲ್ಲೇ ರೋಗಗ್ರಸ್ಥರು ಉಗುಳಿದರೆ ಮತ್ತೊಬ್ಬರಿಗೆ ಬರುವ ಸಾಧ್ಯತೆ ಹೆಚ್ಚು. ಪೋಲಿಸ್ ಇಲಾಖೆ ಅಕ್ಕಪಕ್ಕದಲ್ಲಿಯೇ ಬೀಡಾ ಅಂಗಡಿಗಳಿದ್ದು, ಅದರಲ್ಲಿ ಗುಟ್ಕಾ, ತಂಬಾಕು, ಸಿಗರೇಟ್ ಮಾರಾಟ ಜೋರಾಗಿ ನಡೆಸಿದ್ದು ಪೋಲಿಸರ ಕಣ್ಣಿಗೆ ಕಾಣಿಸುತ್ತಿಲ್ಲವೆ?

LEAVE A REPLY

Please enter your comment!
Please enter your name here