ಕಲಬುರಗಿ, ಜೂನ್. 8: ಕರೊನಾ ಹೊಡೆತಕ್ಕೆ ಮತ್ತೆ ಕಲಬುರಗಿ ಜಿಲ್ಲೆ ತಲ್ಲಣಗೊಂಡAತಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಇಂದು ಸೋಮವಾರ 99 ಕರೊನಾ ಪ್ರಕಣಗಳು ದಾಖಲಾಗಿವೆ.
ಅನ್‌ಲಾಕ್ 1 ಆಗಿದ್ದಾಗಿನಿಂದ ಕಲಬುರಗಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಅಲ್ಲದೆ ಸರಕಾರ ಅನಲಾಕ್‌ಗಾಗಿ ಹಾಕಿದ ಯಾವುದೇ ನಿಯಮಗಳು ಪಾಲಿಸದೆ ಜನರು, ವರ್ತಕರು ಗಾಳಿಗೆ ತೂರುತ್ತಿರುವುದು ಎಲ್ಲಡೆ ಕಂಡುಬರುವ ಸರ್ವೇ ಸಾಮಾನ್ಯ ದೃಶ್ಯವಾಗಿದೆ.
ಆರೋಗ್ಯ ಇಲಾಖೆಯ ವರದಿಯಂತೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ 759 ಕರೊನಾ ಪ್ರಕರಣಗಳು ದಾಖಲಾದಂತಾಗಿದೆ. ಇಂದು ಬಿಡುಗಡೆ ಯಾದವರೆ ಸಂಖ್ಯೆ 47 ಆಗಿದ್ದು ಇಲ್ಲಿಯವರೆಗೆ 213 ಜನರು ಬಿಡುಗಡೆ ಆಗಿದ್ದಾರೆ. ಒಟ್ಟು ಸಕ್ರೀಯ ಪ್ರಕರಣಗಳು 539 ಆಗಿದ್ದು, 7 ಜನರು ಸೋಂಕಿಗೆ ಬಲಿಯಾಗಿದ್ದಾರೆ.