ಸರಕಾರ ನೆರವು ಪಡೆಯಲು ಬೀದಿ ವ್ಯಾಪಾರಿಗಳಿಗೆ ೧೫ ದಿನದ ಗಡುವು: ರಾಹುಲ್ ಪಾಂಡ್ವೆ

0
920

ಕಲಬುರಗಿ. ಜೂನ್.೦೨-ಕೊರೋನಾ ವೈರಸ್ (ಕೊವೀಡ್-೧೯) ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿAದ ಜಾರಿಯಲ್ಲಿರುವ ಲಾಕ್‌ಡೌನ್‌ದಿಂದ ಸಂಕಷ್ಟಕ್ಕೀಡಾದ ಬೀದಿ ವ್ಯಾಪಾರಿಗಳಿಗೆ ಸರ್ಕಾರವು ನೆರವು ನೀಡಲು ಮುಂದಾಗಿದೆ. ಇದಕ್ಕಾಗಿ ವೈಯಕ್ತಿಕ ಮಾಹಿತಿ ಸಲ್ಲಿಸದೇ ಇರುವ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಬೀದಿ ವ್ಯಾಪಾರಿಗಳು ೧೫ ದಿನದೊಳಗಾಗಿ ಸಲ್ಲಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು ತಿಳಿಸಿದ್ದಾರೆ.
ಬೀದಿ ವ್ಯಾಪಾರಿಗಳು ಪಡೆದಿರುವ ಗುರುತಿನ ಚೀಟಿ ಯೊಂದಿಗೆ ತಮ್ಮ ಬ್ಯಾಂಕಿನ ವಿವರ ಹಾಗೂ ಆಧಾರ್ ಸಂಖ್ಯೆಯನ್ನು ಕಲಬುರಗಿ ಮಹಾನಗರ ಪಾಲಿಕೆಯ ದಿನ ದಿಯಾಳ ಅಂತ್ಯೋದಯ ಯೋಜನೆಯ ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ದಕ್ಷಿಣ ಶಾಖೆಗೆ ಸಲ್ಲಿಸಲು ಈಗಾಗಲೇ ಬೀದಿ ವ್ಯಾಪಾರಿಗಳಿಗೆ ತಿಳಿಸಲಾಗಿತ್ತು. ಆದರೆ ಒಟ್ಟು ೯೫೦ ಬೀದಿ ವ್ಯಾಪಾರಿಗಳ ಪೈಕಿ ಕೇವಲ ೧೫೮ ಬೀದಿ ವ್ಯಾಪಾರಿಗಳು ಮಾತ್ರ ವೈಯಕ್ತಿಕ ಮಾಹಿತಿಯನ್ನು ಸಲ್ಲಿಸಿರುತ್ತಾರೆ. ಇನ್ನೂಳಿದ ಬೀದಿ ವ್ಯಾಪಾರಿಗಳು ಮಾಹಿತಿ ಸಲ್ಲಿಸಿರುವುದಿಲ್ಲ.
ವೈಯಕ್ತಿಕ ಮಾಹಿತಿ ಸಲ್ಲಿಸದೇ ಇರುವ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಬೀದಿ ವ್ಯಾಪಾರಿಗಳು ೧೫ ದಿನದೊಳಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ದಿನ ದಿಯಾಳ ಅಂತ್ಯೋದಯ ಯೋಜನೆಯ ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ದಕ್ಷಿಣ ಶಾಖೆಯಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here