ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಬೆಳೆಸಿದ ಹಿರಿಯ ಬಿಜೆಪಿಯ ನಾಯಕರಾದ ಶರಣಪ್ಪ ತಳವಾರ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ರಾಜ್ಯ ಬಿಜೆಪಿ ಎಸ್ಸಿ ಮೊರ್ಚಾದ ಉಪಾಧ್ಯಕ್ಷರಾದ ಧರ್ಮಣ್ಣಾ ಇಟಗಾ ಹಾಊ ಬಿಜೆಪಿ ಹಿರಿಯ ಮುಖಂಡರಾದ ಚಂದ್ರಶೇಖರ ರೆಡ್ಡಿ ಪರಸರೆಡ್ಡಿ ಅವರು ಆಗ್ರಹಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತ ಹಿಂದುಳಿದ ಅದರಲ್ಲೂ ಕೊಲಿ ಸಮಾಜದ ಹಿರಿಯ ಮುಖಂಡರಾದ ಶರಣಪ್ಪಾ ತಳವಾರ ಅವರು ಪಕ್ಷಕ್ಕಾಗಿ ಕಳೆದ ೨೫ ವರ್ಷಗಳಿಂದ ಸಕ್ರೀಯ ಕಾರ್ಯಕರ್ತರಾಗಿದ್ದು, ಅವರನ್ನು ನೇಮಕ ಮಾಡುವುದರಿಂದ ಬೂತ್ ಮಟ್ಟದ ಕಾರ್ಯಕರ್ತರಿಗೆ ಮನ್ನಣೆ ಕೊಟ್ಟಂತಾಗುತ್ತದೆ ಎಂದು ಜಂಟಿಯಾಗಿ ಹೇಳಿದ್ದಾರೆ.