ಕಲಬುರಗಿ.ಮೇ.29.(ಕ.ವಾ)-ಕೃಷಿ ಹಾಗೂ ಕೃಷಿ ಸಂಬoಧಿತ ಚಟುವಟಿಕೆಗೆ ರೈತರು ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿoದ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಮಾಧ್ಯಮಾವಧಿ ಸಾಲ ಪಡೆದು 2020ರ ಜನವರಿ 31ಕ್ಕೆ ಸುಸ್ತಿಯಾಗಿರುವ ಮಾಧ್ಯಮಾವಧಿ ಸಾಲಗಳ ಅಸಲನ್ನು 2020ರ ಜೂನ್ 30 ರೊಳಗೆ ಮರುಪಾವತಿಸಿದ್ದಲ್ಲಿ ರಾಜ್ಯ ಸರ್ಕಾರದಿಂದ ಬಡ್ಡಿ ಮನ್ನಾ ಸೌಲಭ್ಯ ಪಡೆಯಬಹುದಾಗಿದೆ ಎಂದು ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರು ತಿಳಿಸಿದ್ದಾರೆ.