ಕಲಬುರ್ಗಿ, ನ.10- ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ಕುರಿತು ಜರುಗಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಮನೆಯ ಕಂಪೌAಡ್ ಹಾರಿ ಪರಾರಿಯಾಗಿ 12 ದಿನಗಳ ನಂತರ ಮಹಾರಾಷ್ಟçದ ಅಕ್ಕಲಕೋಟೆಯ ಬಳಿ ಕೊನೆಗೂ ಶುಕ್ರವಾರ ಪೋಲಿಸರ ತಂಡಕ್ಕೆ ಸಿಕ್ಕಿದ್ದು, ರಾತ್ರಿ 8-30ರ ಸುಮಾರಿಗೆ ಬಿಗಿ ಪೋಲಿಸ್ ಭದ್ರತೆಯಲ್ಲಿ ಆತನಿಗೆ ನಗರದ ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ಕರೆತಂದರು.
ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ಆತನಿಗೆ ವಿಚಾರಣೆ ಕೈಗೊಂಡು ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಹಾಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಆರೋಪಿಯು ತನ್ನ ಅಫಜಲಪುರದ ಸಂಬAಧಿಕರ ಮನೆಯಿಂದ ಕಲಬುರ್ಗಿಯ ನ್ಯಾಯಾಲಯಕ್ಕೆ ಹಾಜರಾಗಲು ಬರುತ್ತಿದ್ದ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಪೋಲಿಸರು ಗಡಿಯಲ್ಲಿ ತೀವ್ರ ನಿಗಾ ಇಟ್ಟಿದ್ದರು.
ತಲೆ ಮೆರೆಸಿಕೊಂಡಿದ್ದ ಆರ್.ಡಿ. ಪಾಟೀಲ್‌ನಿಗೆ ಆತನ ಅಫಜಲಪುರ ಸಂಬAಧಿಕರ ಮನೆಯಿಂದಲೇ ಮಾಹಿತಿ ಪಡೆದು ಮಹಾರಾಷ್ಟçದಲ್ಲಿ ವಿಶೇಷ ಕಾರ್ಯಾಚರಣೆ ಪೋಲಿಸ್ ತಂಡವು ಬಂಧಿಸಿ ನಗರಕ್ಕೆ ಕರೆದುಕೊಂಡು ಬರುತ್ತಿದ್ದು, ಬಂದ ತಕ್ಷಣವೇ ಆತನಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಈ ಹಿಂದೆ ಆರ್.ಡಿ. ಪಾಟೀಲ್ ನಗರದಲ್ಲಿಯೇ ಅಡಗಿಕೊಂಡು ಮೊಬೈಲ್‌ನನ್ನು ಬೇರೊಬ್ಬರ ಬಳಿ ಕೊಟ್ಟು ಉತ್ತರ ಪ್ರದೇಶಕ್ಕೆ ಕಳಿಸಿದ ವಿಚಾರವು ಸಹ ಬೆಳಕಿಗೆ ಬಂದಿತು. ಆರೋಪಿ ನಗರದಲ್ಲಿಯೇ ಇರುವ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಪೋಲಿಸರು ಎಚ್ಚೆತ್ತು ಆತನಿಗೆ ಬಂಧಿಸಲು ತೆರಳಿದಾಗ ಆತ ಹಿಂಬದಿಯ ಕಂಪೌAಡ್ ಹಾರಿ ಮಹಾರಾಷ್ಟçಕ್ಕೆ ಪರಾರಿಯಾಗಿದ್ದ.
ಇನ್ನೊಂದು ಕಡೆಗೆ ಮಹಾರಾಷ್ಟçಕ್ಕೆ ಆರ್.ಡಿ. ಪಾಟೀಲ್‌ನಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದ ಇಬ್ಬರು ಬಲಗೈ ಬಂಟರನ್ನು ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಯ ಪೋಲಿಸರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಂಧಿಸಿದ್ದರು. ಹೀಗಾಗಿ ಮಹಾರಾಷ್ಟçದಲ್ಲಿಯೇ ಪ್ರಮುಖ ಆರೋಪಿ ಅಡಗಿಕೊಂಡಿರುವ ಕುರಿತು ಆತನ ಸಂಬAಧಿಕರಿAದಲೇ ಖಚಿತಪಡಿಸಿಕೊಂಡು ಪೋಲಿಸರು ಕಾರ್ಯಾಚರಣೆ ಕೈಗೊಂಡು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದುಬಂದಿದೆ.
ಪರಾರಿಯಾದ ಆರ್.ಡಿ. ಪಾಟೀಲ್‌ನಿಗೆ ಸೆರೆ ಹಿಡಿಯಲು ನಗರ ಪೋಲಿಸ್ ಆಯುಕ್ತ ಆರ್. ಚೇತನಕುಮಾರ್ ಅವರು ಡಿಸಿಪಿ ಕವಿತಾ ಸಿಕ್ರಿವಾಲ್ ಅವರ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿದ್ದರು. ಮತ್ತೊಂದೆಡೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಡಿವೈಎಸ್‌ಪಿ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಿದ್ದರು. ಅಂತಿಮವಾಗಿ ಎಸಿಪಿ ಭೂತೇಗೌಡ ಅವರ ನೇತೃತ್ವದ ಪೋಲಿಸ್ ತಂಡವು ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.
ಯಾದಗಿರಿಯಿAದ ಜಾಮೀನು ಅರ್ಜಿ: ಮನೆಯ ಕಂಪೌAಡ್ ಜಿಗಿದು ಪೋಲಿಸರಿಗೆ ಹಾಡುಹಗಲೇ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಆರ್.ಡಿ. ಪಾಟೀಲ್‌ನ ವಿರುದ್ಧ ನಗರದ ವಿಶ್ವವಿದ್ಯಾಲಯ, ಅಶೋಕ್ ನಗರ ಹಾಗೂ ಅಫಜಲಪುರ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಎಲ್ಲ ಪ್ರಕರಣಗಳಲ್ಲಿ ಆತ ಪ್ರಮುಖ ಆರೋಪಿಯಾಗಿದ್ದ. ಅದೇ ರೀತಿ ಯಾದಗಿರಿಯಲ್ಲಿಯೂ ಸಹ ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿದ್ದು, ಆರ್.ಡಿ. ಪಾಟೀಲ್ ವಿರುದ್ಧ ಯಾವುದೇ ಪ್ರಕರಣ ಅಲ್ಲಿ ದಾಖಲಾಗಿರಲಿಲ್ಲ. ಅದನ್ನೇ ಗಮನಿಸಿದ ಆರ್.ಡಿ. ಪಾಟೀಲ್ ಜಾಮೀನು ಪಡೆಯಲು ಅಲ್ಲಿಂದಲೇ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಶುಕ್ರವಾರವೇ ಆತನ ಜಾಮೀನು ಅರ್ಜಿಯನ್ನು ಉಚ್ಛ ನ್ಯಾಯಾಲಯವು ವಿಚಾರಣೆಗೆ ಒಳಪಡಿಸಿತು ಹಾಗೂ ವಿಚಾರಣೆಯನ್ನು ಮುಂದೂಡಿತು.
ಈ ಮಧ್ಯೆ, ಆರ್.ಡಿ. ಪಾಟೀಲ್‌ನಿಗೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯವೂ ಸಹ ಜಾಮೀನು ತಿರಸ್ಕರಿಸಿತ್ತು. ಹೀಗಾಗಿ 24 ಗಂಟೆಗಳಲ್ಲಿ ಆತ ಶರಣಾಗುವುದು ಅನಿವಾರ್ಯವೂ ಆಗಿತ್ತು. ಯಾದಗಿರಿಯಿಂದ ಸಲ್ಲಿಸಿದ್ದ ಜಾಮೀನು ಅರ್ಜಿಯೂ ಸಹ ಮುಂದೂಡಲ್ಪಟ್ಟಿತು. ಈ ಎಲ್ಲದರ ಮಧ್ಯೆ, ಪೋಲಿಸರ ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿ ಸೆರೆಯಾಗಿದ್ದು, ಪ್ರಕರಣದ ಕುರಿತು ತನಿಖೆ ಚುರುಕುಗೊಳ್ಳಲಿದೆ.