ಕಲಬುರಗಿ, ಸೆ. 28:ರಾಜ್ಯದ ರೈತರ ಹಿತಕಾಪಾಡುವಲ್ಲಿ ವಿಫಲವಾದ ರಾಜ್ಯ ಸರಕಾರ ಇಂಡಿಯಾ ಮೈತ್ರಿಗಾಗಿ ತಮಿಳುನಾಡು ಮುಖ್ಯಮಂತ್ರಿಯ ಓಲೈಕೆಗಾಗಿ ಕಾಂಗೈ ಕರ್ನಾಟಕವನ್ನು ತಮಿಳುನಾಡಿಗೆ ಅಡವಿಟ್ಟಿದ್ದಾರೆ ಎಂದು ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.
ಅವರಿಂದು ಕಲಬುರಗಿ ಏರರ್ಪೊರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಇಂಡಿಯಾ ಪಕ್ಷದ ಸೀಟುಗಳನ್ನು ಗೆಲ್ಲಲು ಕಾಂಗೈ ಸರಕಾರ ಈ ತಂತ್ರ ಅನುಸರಿಸುತ್ತಿದ್ದು, ಈ ಹಿಂದೆ ವಿರೋಧ ಪಕ್ಷದಲ್ಲಿಗಾಗ ಕಾಂಗ್ರೆಸ್ ಬೊಬ್ಬೆ ಹೊಡೆದು, ಬೀದಿಗಳಿದು ಹೋರಾಟ ಮಾಡಿ, ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದೆಂದು ಆಗ್ರಹಿಸುತ್ತಿರುವುದು ಈಗ ಏನಾಯಿತು ಎಂದ ಅವರು ನಾಳೆ ಕರ್ನಾಟಕ ಬಂದ್ ವಿಚಾರವಾಗಿ ತಮಿಳುನಾಡು ಮತ್ತು ಕರ್ನಾಟಕ ‘ಎ’ ಟೀಂ ಮತ್ತು ‘ಬಿ’ ಟೀಂಗಳಾಗಿವೆ ಎಂದರು.
ಬಿಜೆಪಿಯೊAದಿಗೆ ಮೈತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ಅವರು ಮೈತ್ರಿಗೆ ಕೌಂಟರ್ ಅಟ್ಯಾಕ್ ಮಾಡಲು ಡಿಕೆಶಿ ಆಪರೇಷನ್ ಹಸ್ತ ವಿಚಾರಕ್ಕೆ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲಾ ಎಂದರು.
ಕಳೆದ ಮೂರು ದಶಕಗಳಿಂದಲೂ ರಾಜಕೀಯ ನೋಡಿದ್ದೇನೆ. ಆಪರೇಷನ ಕೈಗೆ ನಾವು ಹೆದರಲ್ಲಾ ಎಂದ ಅವರು ಕಾಂಗ್ರೆಸ್ ನವರು ಕೋಮುವಾದಿಗಳನ್ನು ದೂರ ಇಡಬೇಕು ಅಂತಾರೆ ಆದ್ರೆ ನಮ್ಮನ್ನು ಅವರು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದರು.
ನಮ್ಮ ಪಕ್ಷದ ಸಿದ್ಧಾಂತ ಬಿಟ್ಟು ಮೈತ್ರಿ ಮಾಡಿಕೊಂಡಿಲ್ಲ, ಎಲ್ಲಾ ಒಟ್ಟಿಗೆ ಕುಳಿತೇ ಮೈತ್ರಿ ಮಾಡಿಕೊಂಡಿರೋದು ಎಂದು ನುಡಿದರು.
Home Featured Kalaburagi ಇಂಡಿಯಾ ಮೈತ್ರಿಗಾಗಿ ರಾಜ್ಯವನ್ನು ತಮಿಳುನಾಡಿಗೆ ಅಡವಿಟ್ಟ ಕಾಂಗೈ ಸರಕಾರ:ಹೆಚ್.ಡಿ.ರೇವಣ್ಣ