ಧಾರವಾಡ, ಏ. 15: ಈ ಬಾರಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಟಿಕೆಟ್ ಕೈತಪ್ಪುವ ಭೀತಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಅವರು ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ.
ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಇಂದು(ಏಪ್ರಿಲ್ 15) ರಾತ್ರಿ ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ನಡೆಸಿದರು. ಆದ್ರೆ, ಸಂಧಾನ ಸಭೆ ವಿಫಲವಾಗಿದ್ದು, ಇದೀಗ ಜಗದೀಶ್ ಶೆಟ್ಟರ್ ಅಂತಿಮವಾಗಿ ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದರು.
ಶಾಸಕ ಸ್ಥಾನಕ್ಕೂ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಘೋಷಿಸಿದ್ದಾರೆ.
ಮುಂದಿನ ನಡೆ ಏನೆಂಬುದು ನಾಳೆ ಕಾರ್ಯ ಕರ್ತರ ಸಭೆಯ ನಂತರ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಲಕ್ಷö್ಮಣ ಸವದಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಕಾಂಗ್ರೆಸ್ ಜಗದೀಶ ಶೆಟ್ಟರ್ ಅವರನ್ನು ಕೂಡ ಕಾಂಗೈ ಸೇರಿಸಿಕೊಳ್ಳುವ ಬಗ್ಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತನಾಡಿ, ಕಾಂಗ್ರೆಸ್‌ಗೆ ಬರುವುದಾದರೆ ಶೆಟ್ಟರ್ ಅವರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ಶನಿವಾರ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷವು ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಮೂರನೇ ಪಟ್ಟಿ ಇನ್ನು ಬಿಡು ಗಡೆ ಮಾಡದೇ ಹಿನ್ನೆಲೆಯಲ್ಲಿ ಕಳೆದ ಎರಡು ದಿನ ಗಳಿಂದ ಹೈಕಮಾಂಡ್‌ಗೆ ಗಡುವು ನೀಡಿದರೂ ಕೂಡ ಶೆಟ್ಟರ್ ಗಡುವಿಗೆ ಕ್ಯಾರೆ ಅನ್ನದೇ ಬಿಜೆಪಿ ನಾಯಕರು ಇನ್ನು ಬಾಕಿ ಉಳಿದಿರುವ 12 ಜನ ಅಭ್ಯರ್ಥಿಗ ಪಟ್ಟಿ ಬಿಡುಗಡೆಗೊಳಿಸದೇ ಇದ್ದಿದ್ದು ಶೆಟ್ಟರ್ ರಾಜೀ ನಾಮೆ ನೀಡುವಂತಾಗಿದೆ.
ಇದರಿAದಾಗಿ ಬಿಜೆಪಿಯ 7ನೇ ವಿಕೆಟ್ ಪತನವಾದಂತಾಗಿದೆ.
ಈಗಾಗಲೇ ಲಕ್ಷö್ಮಣ ಸವದಿ, ಎಂ.ಪಿ. ಕುಮಾರ ಸ್ವಾಮಿ, ಸೊಗಡು ಶಿವಣ್ಣ, ಗೂಳಿಹಟ್ಟಿ ಶೇಖರ್, ನೆಹರು ಓಲೆಕಾರ್ ಅವರುಗಳು ಶಾಸಕ ಸ್ಥಾನಕ್ಕೂ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ, ಕಾಂಗೈ, ಜೆಡಿಎಸ್ ಸೇರ್ಪಡೆಗೊಂಡು ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.