ರಾಜ್ಯ ಗೌರವ ಪ್ರಾಣಿ ಕಲ್ಯಾಣಾಧಿಕಾರಿಯಾಗಿ ಮೋಟಗಿ ನಾಮನಿರ್ದೇಶನ

0
714

ಕಲಬುರ್ಗಿ, ಡಿ.28- ನಗರದ ನಂದಿ ಎನಿಮಲ್ ವೆಲ್‌ಫೇರ್ ಸೊಸೈಟಿ ಆಫ್ ಗುಲಬರ್ಗಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುಣಚಿರಾಯ್ (ಕೇಶವ್) ಮೋಟಗಿ ಅವರನ್ನು ಭಾರತ ಸರ್ಕಾರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಡೈರಿ ಸಚಿವಾಲಯದ ಪ್ರಾಣಿ ಕಲ್ಯಾಣಿ ಮಂಡಳಿಗೆ ರಾಜ್ಯ ಗೌರವ ಪ್ರಾಣಿ ಕಲ್ಯಾಣಾಧಿಕಾರಿಯಾಗಿ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಂಡಳಿ ಕಾರ್ಯದರ್ಶಿ ಎಸ್.ಕೆ. ದತ್ತಾ ಅವರು ತಿಳಿಸಿದ್ದಾರೆ.
ಹುಣಚಿರಾಯ್ (ಕೇಶವ್) ಮೋಟಗಿ ಅವರು ಕಳೆದ 20 ವರ್ಷಗಳಿಂದ ಗೋಶಾಲೆಯನ್ನು ಸ್ಥಾಪಿಸಿ, ಬಿಡಾಡಿ, ರೋಗಗ್ರಸ್ತ, ಅಂಗವಿಕಲ ಮತ್ತು ವಿವಿಧ ನ್ಯಾಯಾಲಯಗಳ, ಪೋಲಿಸ್ ಕಸ್ಟಡಿಯಲ್ಲಿನ ಮೂಕ ಜಾನುವಾರುಗಳು ರಕ್ಷಣೆ, ತುರ್ತು ಅಪಘಾತಕ್ಕೆ ಸಿಲುಕಿದ ಮೂಕ ಪ್ರಾಣಿಗಳ ಪಾಲನೆ ಪೋಷಣೆ ಮಾಡುತ್ತಿದ್ದಾರೆ.
ಅಲ್ಲದೇ ಸರ್ವೋಚ್ಛ ನ್ಯಾಯಾಲಯಗಳ ಮತ್ತು ಉಚ್ಛ ನ್ಯಾಯಾಲಗಳ ಆದೇಶಗಳು ಸರ್ಕಾರದ ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಅನುಪಾಲನಾಗೊಳಿಸುವುದು, ಪ್ರಾಣಿಗಳ ಮೇಲಾಗುವ ಕ್ರೌರ್ಯ, ದೌರ್ಜನ್ಯದ ವಿರುದ್ಧ ಹಾಗೂ ಅಕ್ರಮ ಜಾನುವಾರುಗಳ ಸಾಗಾಟ ತಡೆಗಟ್ಟುವ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ. ಮುಂದಿನ ಐದು ವರ್ಷಗಳ ಅವಧಿಗೆ ಕೇಶವ್ ಮೋಟಗಿ ಅವರು ಕರ್ನಾಟಕ ರಾಜ್ಯ ಗೌರವ ಪ್ರಾಣಿ ಕಲ್ಯಾಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವರು.

LEAVE A REPLY

Please enter your comment!
Please enter your name here