ಎನ್‌ಐಎ ತಂಡದಿoದ ಕಲಬುರಗಿ ಪಿಎಫ್‌ಐ ಜಿಲ್ಲಾಧ್ಯಕ್ಷ ವಶಕ್ಕೆ

0
599

ಕಲಬುರಗಿ, ಸೆ. 22:ದೇಶದಾದ್ಯಂತ ಎನ್‌ಐಎ ತಂಡ ಪಿಎಫ್ ಐ, ಎಸ್ ಡಿಪಿಐ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ದಾಳಿ ನಡೆಸಿದೆ.
ಅದೇ ರೀತಿ ಕಲಬುರಗಿಯಲ್ಲೂ ಎನ್‌ಐಎ ತಂಡ ಪಿಎಫ್‌ಐ ಜಿಲ್ಲಾಧ್ಯಕ್ಷ ಶೇಖ್ ಎಜಾಜ್ ಅಲಿ ಮತ್ತು ಪಿಎಫ್‌ಐನ ರಾಜ್ಯ ಖಜಾಂಚಿ ಶಾಹೀದ್ ನಾಸೀರ್ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದೆ.
ಬೆಳಿಗ್ಗೆ ಸುಮಾರು 3:30 ರ ವೇಳೆ ಫುಲ್ ಫೋರ್ಸ್ನೊಂದಿಗೆ ಎಂಟ್ರಿ ಕೊಟ್ಟಿರೋ ಎನ್‌ಐಎ ತಂಡ, ಕಲಬುರಗಿ ನಗರದ ಮಹೇಬೂಬ ನಗರದ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಜಾಲಾಡಿದೆ.

ದಾಳಿ ನಡೆಸಿ ಜಾಲಾಡಿರೋ ಎನ್‌ಐಎ ಟೀಂ, ಪಿಎಫ್ ಐ ಜಿಲ್ಲಾಧ್ಯಕ್ಷ ಶೇಖ್ ಎಜಾಜ್ ಅಲಿ ಮನೆಯಲ್ಲಿ 14 ಲಕ್ಷ ನಗದು ಹಣ,17 ಹೊಸ ಮೊಬೈಲ್, 1 ಟ್ಯಾಬ್ ಮತ್ತು ಪಿಎಫ್ ಐ ಗೆ ಸಂಬAಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ನಗದು ಹಣ ಮೂಲ ಮತ್ತು 17 ಹೊಸ ಮೊಬೈಲ್ ಇಟ್ಟುಕೊಂಡಿರುವ ಬಗ್ಗೆ ವಿಚಾರಣೆ ನಡೆಸುತ್ತಿದೆ. ಇನ್ನು ಶೆಖ್ ಎಜಾಜ್ ಅಲಿಯನ್ನ ಎನ್‌ಐಎ ತಂಡ ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದಾಗ ಅಲಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಶೇಖ್ ಎಜಾಜ್ ಅಲಿಯನ್ನ ವಶಕ್ಕೆ ಪಡೆದಿರುವ ಎನ್‌ಐಎ ತಂಡ, ಕಲಬುರಗಿಯಲ್ಲಿಯೇ ಪ್ರಾಥಮಿಕ ವಿಚಾರಣೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇನ್ನು ಮನೆಯಲ್ಲಿ ಪತ್ತೆಯಾಗದ ಪಿಎಫ್ ಐ ರಾಜ್ಯ ಖಜಾಂಚಿ ಶಾಹೀದ್ ನಾಸೀರ್‌ನನ್ನ ಕೇರಳದಿಂದ ಕರ್ನಾಟಕಕ್ಕೆ ಬರುವ ಮಾರ್ಗಮಧ್ಯದಲ್ಲಿ ವಶಕ್ಕೆ ಪಡೆದು ಎನ್‌ಐಎ ಟೀಂ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಎನ್‌ಐಎ ತಂಡ ಬೆಳ್ಳಂ ಬೆಳಿಗ್ಗೆ ಪಿಎಫ್‌ಐನ ಕಲಬುರಗಿ ಜಿಲ್ಲಾಧ್ಯಕ್ಷ ಶೇಖ್ ಎಜಾಜ್ ಅಲಿ ಮತ್ತು ರಾಜ್ಯ ಖಜಾಂಚಿ ಶಾಹೀದ್ ನಾಸೀರ್ ಮೇಲೆ ದಾಳಿ ನಡೆಸಿ ಬಿಗ್ ಶಾಕ್ ಕೊಟ್ಟಿದೆ.
ಮುಂಜಾಗ್ರತಾ ಕ್ರಮವಾಗಿ ಶೇಖ್ ಎಜಾಜ್ ಅಲಿ ಮನೆ ಮುಂಭಾಗದಲ್ಲಿ ಎರಡು ಕೆಎಸ್ ಆರ್‌ಪಿ ತಂಡ ಮತ್ತು ಪೊಲೀಸ್ ಸಿಬ್ಬಂದಿಗ¼ನ್ನು ನಿಯೋಜನೆ ಮಾಡಲಾಗಿದೆ.

LEAVE A REPLY

Please enter your comment!
Please enter your name here