ಕಲಬುರಗಿ, ಸೆ. 12: ದೇಶಕ್ಕೆ ಸ್ವಾತಂತ್ರö್ಯ ಬಂದು ಆಗಸ್ಟ್ 15. 2022ಕ್ಕೆ 74 ಪೂರ್ಣಗೊಂಡು 75ನೇ ಅಮೃತ ಮಹೋತ್ಸವ ವರ್ಷ ಆಚರಣೆ ಮಾಡಿದ್ದು ಹೆಮ್ಮೆ ಮತ್ತು ಸ್ವಾಭಿಮಾನವಾಗಿದೆ. ಆದರೆ ನಮ್ಮ ಕಲ್ಯಾಣ ಕರ್ನಾಟಕ ಅಂದರೆ ಹಿಂದಿನ ಹೈದ್ರಾಬಾದ ಕರ್ನಾಟಕ ಭಾಗಕ್ಕೆ ನಿಜಾಮನಿಂದ ಮುಕ್ತಿ ದೊರಕಿದ್ದು, ನಮ್ಮ ದೇಶಕ್ಕೆ ಸ್ವಾತಂತ್ರö್ಯ ಬಂದು ವರ್ಷ ಒಂದು ತಿಂಗಳು ಎರಡು ದಿನ ಬಿಟ್ಟು ಅಂದರೆ ಸೆಪ್ಟಂಬರ್ 17, 1948. ಅಂದ ಮೇಲೆ ನಮ್ಮ ಭಾಗಕ್ಕೆ 75ನೇ ವರ್ಷದ ವಿಮೋಚನಾ ಅಮೃತ ಮಹೋತ್ಸವ ಹೇಗೆ ಆಚರಿಸಲು ಸಾಧ್ಯ?
ಹೀಗಿದ್ದೂ ಕೂಡ ಈಗೇಕೆ ಅಮೃತ ಮಹೋತ್ಸವ ಆಚರಣೆ? ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ಎಲ್ಲ ತಯಾರಿ ನಡೆಸುತ್ತಿದ್ದು, ಹಲವಾರು ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದು ಒಂದು ವಿಪರ್ಯಾಸವೇ ಸರಿ.
ಸೆಪ್ಟೆಂಬರ್ 17 ರಿಂದ ಬರುವ ವರ್ಷ 2023ರ ಸಪ್ಟೆಂಬರ್ ವರೆಗೆ ಒಂದು ವರ್ಷದ ವರೆಗೆ ಈ ಭಾಗದಲ್ಲಿ ಸುವರ್ಣ ವಿಮೋಚನಾ ವರ್ಷ ಎಂದು ಆಚರಿಸದರೆ ಅದಕ್ಕೊಂದು ಅರ್ಥ ಬರುತ್ತದೆ. ಅದು ಬಿಟ್ಟು 74ನೇವರ್ಷಕ್ಕೆ ಸುವರ್ಣ ಸ್ವಾತಂತ್ರö್ಯ ವರ್ಷ ಅಮೃತ ವರ್ಷ ಆಚರಿಸಲು ಹೋರಟ ಸರಕಾರ ಮತ್ತು ಜಿಲ್ಲಾಡಳಿಕ್ಕೆ ಏನೆನ್ನಬೇಕು?
ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ಬರುವ 2023ರ ಸೆಪ್ಟಂಬರ್ 17ನೇ ದಿನಾಂಕದAದು ಸುವರ್ಣ ಸ್ವಾತಂತ್ರö್ಯ ಅಮೃತ ಮಹೋತ್ಸವ ಆಚರಣೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಚರಣೆಗೆ ಮುಂದಾಗುವರೇ ಎಂಬುದು ಕಾದು ನೋಡಬೇಕಾಗಿದೆ.