ಮುತಾಲಿಕ ಮಂಗಳೂರು ಪ್ರವೇಶ ನಿಷೇಧ ಶ್ರೀರಾಮ ಸೇನೆಯ ವಿದ್ಯಾರ್ಥಿ ಘಟಕ ಖಂಡನೆ

0
671

ಕಲಬುರಗಿ, ಜುಲೈ, 29: ಶ್ರೀರಾಮ ಸೇನೆಯ ಮುಖಂಡರಾದ ಪ್ರಮೋದ ಮುತಾಲಿಕ ಅವರನ್ನು ಮಂಗಳೂರ ಜಿಲ್ಲಾ ಪ್ರವೇಶ ನಿಷೇಧ ಮಾಡಿರುವುದನ್ನು ಕಲಬುರಗಿ ಜಿಲ್ಲಾ ಶ್ರೀರಾಮಸೇನೆ ಉಗ್ರವಾಗಿ ಖಂಡಿಸುತ್ತದೆ ಎಂದು ಶ್ರೀರಾಮ ಸೇನೆಯ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಮಹೇಶ ಕೆಂಭಾವಿ ಅವರು ಹೇಳಿದ್ದಾರೆ.
ಅವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡುತ್ತ, ಮಂಗಳೂರು ಜಿಲ್ಲೆಯಲ್ಲಿ ಕಲಂ 144ರ ಅನ್ವಯ ನಿಷೇದಾಜ್ಞೆ ಜಾರಿ ಇರುವಾಗ ವಿಜಯೇಂದ್ರ. ಇನ್ನಿತರರು ಬೆಳ್ಳಾರಗೆ ಹೋಗಿರುವಾಗ ಪ್ರವೀಣ ಕುಟುಂಬಕ್ಕೆ ಸಾಂತ್ವಾನ ಧೈರ್ಯ ತುಂಬಲು ನಿರ್ಧರಿಸಿರುವ ಮುತ್ತಾಲಿಕರನ್ನ ಮಂಗಳೂರ ಜಿಲ್ಲಾ ಪ್ರವೇಶಿಸದಂತೆ ನಿಷೇಧ ಹೇರಿರುವದು ಖಂಡನೀಯ, ಹಿಂದು ಮುಖಂಡರನ್ನ ನಿಷೇಧಿಸಿದ ಹಾಗೆ ಸರಕಾರಕ್ಕೆ ಧಮ್ ಇದ್ದರೇ ಪಿಎಫ್‌ಐ ಹಾಗೂ ಎಸ್‌ಡಿಪಿ ಆಯ್‌ಗಳಿಗೆ ನಿಷೇಧ ಹೇರಲಿ ನೊಡೋಣ ಎಂದು ಪ್ರಶ್ನಿಸಿರುವ ಅವರು ಸರಕಾರದ ಇಂತಹ ಕ್ರಮಗಳಿಂದಲೇ ಹಿಂದು ಯುವಕರ ಹತ್ಯೆಯಾಗುತ್ತಿವೆ ನಡೆಯಿತ್ತಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here