ಕಲಬುರಗಿ, ಜುಲೈ, 29: ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಯಾಗಬೇಕಾದರೆ ಪ್ಲಾಸ್ಟಿಕ್ ಉತ್ಪಾದನೆ ಸ್ಥಗಿತಗೊಳಿಸುವುದು ಅಗತ್ಯ ವಾಗಿದೆ, ಈ ಹಿನ್ನೆಲೆಯಲ್ಲಿ ಮೊದಲು ಉತ್ಪಾದನೆ ಜೊತೆಗೆ ಹೋಲ್‌ಸೆಲ್ ಪ್ಲಾಸ್ಟಿಕ್ ಮಾರಾಟಗಾರರಿಗೆ ಮಟ್ಟ ಹಾಕುವುದು ಅಗತ್ಯವಾಗಿದೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ಲಾತೂರಕರ ಹೇಳಿದರು.
ಜನರು ಪ್ಲಾಸ್ಟಿಕ್ ಬ್ಯಾಗ್ ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದಾಗಿ ಮಳೆಗಾಲದ ಕಾರಣ ಎಲ್ಲ ಕಡೆ ಕೊಳಚೆ, ಹೊಲಸು ದುರ್ವಾಸನೆ ಬೀರುತ್ತಿದೆ. ಮೊದಲು ಮಹಾನಗರ ಪಾಲಿಕೆ ಅಧಿಕಾರಿಗಳು ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಅದರೊಂದಿಗೆ ಪ್ಲಾಸ್ಟಿಕ್ ಉತ್ಪಾದನಾ ಘಟಕಗಳನ್ನು ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಂಗಡಿ ,ತರಕಾರಿ ಮಾರ್ಕೆಟ್‌ಗಳಲ್ಲಿ ಜನರಿಗೆ ಪ್ಲಾಸ್ಟಿಕ್ ಬ್ಯಾಗ್ ಕೊಡುವುದನ್ನು ಕಟ್ಟು ನಿಟ್ಟಾಗಿ ನಿರ್ಭಂದಿಸಬೇಕು, ಎಲ್ಲಡೆ ಪ್ಲಾಸ್ಟಿಕ್ ಬಳಕೆ ರಾಜಾರೋಷವಾಗಿ ನಡೆದಿದ್ದು, ಅಧಿಕಾರಿಗಳ ಕಣ್ಣಿಗೆ ಇದು ಕಾಣಿಸುವುದಿಲ್ಲವೋ ತಿಳಿಯದಾಗಿದೆ. ಜನರು ಕೂಡ ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದು, ಮನೆಯಿಂದ ಒಂದು ಕೈಚಿಲ ತರುವಂತೆ ಲಾತೂರಕರ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಈ ಮುಂಚೆ ಕಳೆದ ಹದಿನೈದು ದಿನಗಳಲ್ಲಿ ಎರಡು ಬಾರಿ ನಮ್ಮ ಪತ್ರಿಕೆ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅಧಿಕಾರಿಗಳು ಕಡಿವಾಣ ಹಾಕುವ ಕುರಿತು ಸುದ್ದಿ ಪ್ರಕಟಿಸಿತ್ತು, ಆದರೂ ಅಧಿಕಾರಿಗಳಿಗೆ ಮನಸೋಇಚ್ಚೆ ಎಲ್ಲವೆಂಬತಾಗಿದೆ.