ಬಾಗಲಕೋಟ, ಜುಲೈ, 16: ಬಿಜೆಪಿಯವವರಿಗೆ ತಾಕತ್ತಿದ್ದರೆ ಬಾದಾಮಿಗೆ ಬಂದು ಸಿದ್ದರಾಮಯ್ಯನ ವಿರುದ್ದ ನಿಂತು ಗೆಲ್ಲಲ್ಲಿ ನೋಡೋಣ ಎಂದು ಹುನಗುಂದದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಸವಾಲ ಹಾಕಿದ್ದಾರೆ.
ಅವರು ಶನಿವಾರ ಇಲಕಲ್ ಪಟ್ಟಣದಲ್ಲಿ ಇದು ಮಾತನಾಡುತ್ತ, ನಾನು ಕೂಡ ಇದೇ ಜಿಲ್ಲೆಯಲ್ಲಿ ಹುಟ್ಟಿದ್ದೇನೆ, ಇದೇ ಜಿಲ್ಲೆಯಲ್ಲಿ ಜೀವನ ಮಾಡಿದ್ದೇನೆ, ಇಲ್ಲಿ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನ ಕರೆದುಕೊಂಡು ಬಂದು ನಿಲ್ಲಲ್ಲಿ. ನೋಡೋಣ ತಾಕತ್ತಿದ್ರೆ ಗೆಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾg
ಮುಂಬರುವ ರಾಜ್ಯ ವಿಧಾಣಸಭೆ ಚುನಾವಣೆಯಲ್ಲಿ ನಮ್ಮ ನಾಯಕ ಸಿದ್ದರಾಮಯ್ಯನವರನ್ನ ನೂರಾ ಒಂದು ಪ್ರತಿಶತ ಗೆದ್ದೆ ಗೆಲ್ಲಿಸುತ್ತೇನೆ ಎಂದು ನುಡಿದರು.
ಬಿಜೆಪಿಗೆ ನೇರ ಸವಾಲು ಹಾಕಿದ ಮಾಜಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಯಡಿಯೂರಪ್ಪ ಸೇರಿ ಯಾವ ದೊಣ್ಣೆ ನಾಯಕರನ್ನು ಕರಕೊಂಡು ಬಂದು ಇಲ್ಲಿ ನಿಲ್ಲಿಸಿದರೂ ಸಿದ್ಧರಾಮಯ್ಯನವರ ಗೆಲುವು ಖಚಿತವಾಗಿದೆ ಎಂದರು.