ಮಕ್ತಂಪೂರದಲ್ಲಿ ಇಸ್ಪೇಟ್ ಜೂಜಾಟ; 15 ಜನರ ಬಂಧನ

0
1718

ಕಲಬುರಗಿ, ಜು. 04: ನಗರದ ಮಕ್ತಂಪುರ ಬಡಾವಣೆ ಹೊಳಿಕಟ್ಟಾ ಹತ್ತಿರ ನಿನ್ನೆ ಇಸ್ಪೇಟ್ ಜೂಜಾಟ ಅಡ್ಡೆ ಮೇಲೆ ಪೋಲಿಸರು ದಾಳಿ ನಡೆಸಿ, ಅಂಧರ ಭಾಹರ್ ಜೂಜಾಟದಲ್ಲಿ ತೊಡಗಿದ್ದ 15 ಜನರನ್ನು ಬಂಧಿಸಿ ಅವರಿಂದ ಆಟಕ್ಕಿಟ್ಟಿದ್ದ ಸುಮಾರು 24 ಸಾವಿರಕ್ಕೂ ಅಧಿಕ ಹಣವನ್ನು ಜಪ್ತಿ ಮಾಡಲಾಗಿದೆ.
ಈ ಬಗ್ಗೆ ಬ್ರಹ್ಮಪೂರ ಪೋಲಿಸ್ ಠಾಣೆಯಲ್ಲಿ ಗುನ್ಹೆ ನಂ. 87ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಪೋಲಿಸರಿಗೆ ಅನುಮಾನ ಬಂದು ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರರಾವ ಅವರ ನೇತ್ವದಲ್ಲಿ ದಾಳಿ ನಡೆಸಲಾಯಿತು.
ದಾಳಿಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಸಾಗರ ತಂದೆ ವಿಠಲ ತಗಡಗರ್, ರವಿ ವಿಜಯಕುಮಾರ ಶಹಾಬಾದಿ, ಸಿದ್ದು ತಂದೆ ನಾಗಶಿವಣಗಿ, ಯಾಕುಬ ಇಸ್ಮಾ ಯಿಲ್ ಮಾಗ್ವಾಳ, ಕುಶಾಲ, ಆರೀಫ್ ಅಬ್ದುಲ್ ರಜಾಕ್ ಮಲವಾಲೆ, ಪ್ರಮೋದ ತಂದೆ ಪ್ರಕಾಶ ಅಂಬರಖಾನೆ, ಪ್ರಕಾಶ ಸುಭಾಷ ಗೌಳಿ, ಸಂತೋಷ ಶರಣಪ್ಪ ಮಾಳಿ, ಅನೀಲ ಅರುಣಕುಮಾರ ಗುಜಾಡ, ಅಬ್ದುಲ್ ಅಜೀಜ ಉಸ್ಮಾನ ಗುಲ್‌ರೋಸ್, ಸಿದ್ಧರಾಮ ಚಂದ್ರಕಾಥ ಪಾಟೀಲ ಗಣೇಶ ರೇವಣಸಿದ್ದಪ್ಪ ಗೌಳಿ ಮತ್ತು ಸುಪ್ರೀತ್ ನವಲೆ ಎಂಬುವವರನ್ನು ಬಂಧಿಸಿಸಲಾಗಿದೆ.
ಈ ದಾಳಿಯಲ್ಲಿ ಠಾಣೆಯ ಸಿಬ್ಬಂದಿಯವರಾದ ಶಿವಪ್ರಕಾಶ ಹೆಚ್.ಸಿ, ಪಿಸಿಗಳಾಧ ರಾಮು ಪವಾರ, ಸುರೇಶ ಸಂತೋಷಕುಮಾರ, ಉತ್ತಮ್ ಮತ್ತು ಶಿವಶರಣಪ್ಪ ಅವರುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here