ಬೆಂಗಳೂರು, ಮೇ.13-ಕಳೆದ ಏಪ್ರಿಲ್ 28 ರಂದು ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಯಾಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವತಿಯ ಮೇಲೆ ಯಾಸಿಡ್ ದಾಳಿ ನಡೆಸಿದ್ದ ಈತ 16 ದಿನಗಳ ಬಳಿಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಯಾರಿಗೂ ಸಿಗಬಾರದೆಂದು ನಾಗೇಶ್ ತಮಿಳುನಾಡಿನಲ್ಲಿ ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ. ಆದರೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವತಿ ಮೇಲೆ ಯಾಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್ ಹಿಡಿಯಲು ವಿಶೇಷ ತಂಡಗಳು ಶ್ರಮಿಸಿದ್ದವು
ಕೃತ್ಯ ನಡೆಸಿದ್ದ ನಾಗೇಶ್ ಯಾವುದೇ ಸಾಕ್ಷಿ ಬಿಡದೆ ಪರಾರಿಯಾಗಿದ್ದರಿಂದ ಆತನ ಬಂಧನಕ್ಕೆ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು.
ಆರೋಪಿ ನಾಗೇಶ್ ಬಹು ದಿನಗಳ ಹಿಂದೆಯೇ ಪೂರ್ವ ಸಂಚು ಮಾಡಿ ಕೃತ್ಯ ಎಸಗಿ ಮನೆಯವರಿಗೆ ಮನೆ ಖಾಲಿ ಮಾಡಲು ತಿಳಿಸಿದ್ದು ಬೇರೆ ಬೇರೆ ರಾಜ್ಯಗಳಿಗೂ ವಿಶೇಷ ತಂಡಗಳನ್ನು ರವಾನೆ ಮಾಡಲಾಗಿತ್ತು.
ಎಲ್ಲಾ ದೇವಸ್ಥಾನದಲ್ಲಿ ಸಹ ಹುಡುಕಾಟ ನಡೆಸಲಾಗಿತ್ತು.ಕಳೆದ ಏಪ್ರಿಲ್? 28ರಂದು ಭಗ್ನ ಪ್ರೇಮಿ ನಾಗೇಶ್ 23 ವರ್ಷದ ಯವತಿ ಮೇಲೆ ???ಸಿಡ್ ದಾಳಿ ನಡೆಸಿದ್ದ.
ಪ್ರೀತಿಗೆ ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ್ದನು. ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ನಲ್ಲಿ ಕೆಲಸ ಮಾಡುಲು ತೆರಳುತ್ತಿದ್ದ ವೇಳೆ ಭಗ್ನ ಪ್ರೇಮಿ ನಾಗೇಶ್? ಯುವತಿ ಮೇಲೆ ಯಾಸಿಡ್ ಎರಚಿ ಪರಾರಿಯಾಗಿದ್ದು ಅಂದಿನಿAದ ಆತನ ಪತ್ತೆಗೆ. ಪೊಲೀಸರು ಶೋಧ ನಡೆಸಿದ್ದು.
ಯುವತಿ ಗುಣಮುಖ:
ಈ ನಡುವೆ ಯಾಸಿಡ್ ದಾಳಿಗೊಳಗಾದ ಯುವತಿಯ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡುಬAದಿದೆ. ಯಾಸಿಡ್ ದಾಳಿಗೆ ಒಳಗಾಗಿ ಸೆಂಟ್ ಜಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬAದಿದ್ದು ಭಯ ಪಡುವ ಆತಂಕ ದೂರವಾಗಿದೆ.
ಯುವತಿಯನ್ನ ಆಸ್ಪತ್ರೆಯ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ಬರೋಬ್ಬರಿ 16 ದಿನಗಳ ನಿರಂತರ ಹೋರಾಟದಲ್ಲಿ ಯುವತಿ ಗೆದ್ದು ಬಂದಿದ್ದಾರೆ.
ಅನ್ನ ಸೇವನೆ: :ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ನಡುವೆ, ಪ್ರತೀ ಕ್ಷಣವೂ ಏನೋ ಅನ್ನೋ ಆತಂಕ ಇದೀಗ ಇಲ್ಲ. ಬರ್ನಿಂಗ್ ಸ್ಪೆಷಲ್ ವಾರ್ಡ್ ನಲ್ಲಿ ಯುವತಿ ಆರೈಕೆಯಲ್ಲಿದ್ದಾರೆ.
ಯುವತಿ ಸ್ವಲ್ಪ ಸ್ವಲ್ಪವೇ ಅನ್ನವನ್ನು ಸೇವಿಸಲು ಆರಂಭಿಸಿ ಶುರುದ್ದಾರೆ. ಒಣ ಹಣ್ಣುಗಳನ್ನು ಪುಡಿ ಮಾಡಿ, ಸರಿ ಜೊತೆ ಬೆರೆಸಿ ಕೊಡಲು ಪೋಷಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.
ಮುಖದ ಮುಂಭಾಗ ಮಾತ್ರ ಆಸಿ???ನಿಂದ ಸುಟ್ಟಿಲ್ಲ, ಮುಖದ ಎಡ ಮತ್ತು ಬಲಭಾಗ ಸುಟ್ಟಿದ್ದು, ಕಿವಿಗೆ ಹಾನಿಯಾಗಿದೆ. ಇನ್ನೂ ಶೇ 10% ನಷ್ಟು ಚರ್ಮ ಬದಲಾಣೆಯ (ಸ್ಕಿನ್ ಟ್ರ‍್ಯಾನ್ಸ್ ಪ್ಲಾಂಟೇಷನ್) ಸರ್ಜರಿ ನಡೆಸಬೇಕಿದ್ದು ಯುವತಿಯು ಕುಟುಂಬಸ್ಥರ ಜೊತೆಗೆ ಮಾತನಾಡುತ್ತಿದ್ದಾರೆ.