ಕಲಬುರಗಿ, ಜುಲೈ. ೦೩: ಮಹಾಮಾರಿ ಡೆಡ್ಲಿವೈರಸ್ ಕೊರೊನಾ ತನ್ನ ಅಜಾನುಭಾವುಗಳಿಂದ ದಿನೇ ದಿನೇ ಅಟ್ಟಹಾಸ ಮೇರೆಯುತ್ತಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇಂದು ಶುಕ್ರವಾರ ಒಂದೇ ದಿನ ೭೨ ಜನರಿಗೆ ವಕ್ಕರಿಸಿದೆ.
ಇಂದಿನ ೭೨ ಜನರು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೧೫೬೦ಕ್ಕೆ ಏರಿದ್ದು, ಇದರಲ್ಲಿ ೧೭ ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಒಟ್ಟು ೧೧೪೩ ಮಂದಿ ಗುಣಮುಖರಾಗಿದ್ದು, ೩೯೫ ಸಕ್ರೀಯ ಪ್ರಕರಣಗಳಿದ್ದು, ಇಲ್ಲಿಯವರೆಗೆ ೨೨ ಜನರು ಕೋವಿಡ್ ೧೯ಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗು ತ್ತಿದ್ದು, ಜಿಲ್ಲಾಡಳಿತದ ನಿಯಂತ್ರಣಕ್ಕೆ ಬಾರದಂತಾಗಿದೆ.
ನಗರದಲ್ಲಿ ರಾತ್ರಿ ೮ ರಿಂದ ಮುಂಜಾನೆ ೫.೦೦ ಗಂಟೆವರೆಗೆ ರಾತ್ರಿ ಕರ್ಫ್ಯೂ ಇದ್ದರೂ ಕೂಡಾ ಹಲವಾರು ಹೋಟೆಲ್‌ಗಳು, ಅಂಗಡಿಗಳು, ಖಾನಾವಳಿಗಳು ಬಿಂದಾಸ್ ಆಗಿ ತೆರೆದು ವ್ಯಾಪಾರ ನಡೆಸುತ್ತಿರುವುದು ಅಲ್ಲಲ್ಲಿ ಕಂಡುಬAದರೂ ಅದು ಪೋಲಿಸರಿಗೆ ಕಾಣದಂತಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಹಾನಗರಪಾಲಿಕೆ ಮತ್ತು ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹಲವರ ಅಭಿಪ್ರಾಯವಾಗಿದೆ.