ಕಲಬುರಗಿ, ಮೇ. 6: ಇತ್ತೀಚೆಗೆ ನಡೆದ ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಖರ್ಗೆಯವರ ಆಪ್ತರೆ ಕಿಂಗ್‌ಪಿನ್‌ಗಳಾಗಿದ್ದು, ಕೆಲವು ಕೆಲ ದಿನಗಳಿಂದ ಈ ಇಬ್ಬರು ಎಷು ಆಪ್ತರಾಗಿದ್ದರು ಎಂಬುದು ಎಲ್ಲರಿಗೂ ಗೊತಿದ್ದ ವಿಚಾರವಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಅವರು ಶುಕ್ರವಾರ ನಗರದ ಪೋಲಿಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಪ್ರಿಯಾಂಕ್ ಖರ್ಗೆ ಅವರು ಪ್ರಚಾರ ಪಡೆಯೋಕ್ಕೆ ಮಾತಾಡ್ತಾರೆ, ಸಿಐಡಿಯವರು ಪಿಎಸ್‌ಐ ನೇಮಕಾತಿ ಹಗಗರಣ ಬಗ್ಗೆ ಅವರಿಗೆ ನೋಟಿಸ್ ಕೊಟ್ಟರೆ ಬರಲ್ಲ, ತನಿಖೆ ಚುರುಕಾಗಿ ನಡಿತಿದೆ, ಸಿಐಡಿ ಪೋಲಿಸರು ಎಲ್ಲ ವಿಷಯ ಹೊರ ಹಾಕ್ತಾರೆ ನೋಡ್ತಿರಿ ಎಂದು ತಿಳಸಿದರು.
ನಮ್ಮ ಸರಕಾರ ಹಗರಣ ನಡೆದ ಬಗ್ಗೆ ತಿಳಿಯುತ್ತಲೇ ಸಿಐಡಿ ತನಿಖೆ ನಡೆಸಿದ್ದು, ಇದರಲ್ಲಿ ಯಾವುದೇ ಪಕ್ಷದ ವ್ಯಕ್ತಿಗಳಿರಲಿ ಅವರನ್ನೇಲ್ಲ ಬಂಧಿಸಲಾಗಿದೆ. ಸರಕಾರದ ದಿಟ್ಟ ಕ್ರಮದಿಂದಾಗಿ ಇಷ್ಟು ತನಿಖೆ ಪ್ರಗತಿ ಸಾಧಿಸಿದೆ ಎಂದರು.