ಚಿತ್ತಾಪೂರ, ಏ. 12: ತಾಲೂಕಿನ ಶ್ರೀ ಕ್ಷೇತ್ರ ಸನ್ನತಿಯ ಶ್ರೀ ಚಂದ್ರಲಾ ಪರಮೇಶ್ಮರಿ ದೇವಿಯ ಉತ್ಸವವು ದಿನಾಂಕ 16.4.2022 ರಿಂದ 24.4.2022ರ ವರೆಗೆ ವಿಜೃಂಭಣೆಯಿoದ ಆಚರಿಸಲು ದೇವಸ್ಥಾನ ಸಮಿತಿಯು ನಿರ್ಧರಿಸಿದೆ.
ಮಹದನುಗ್ರಹದಿಂದ ಶ್ರೀ ಕ್ಷೇತ್ರ‍್ರ ಸನ್ನತಿಯಲ್ಲಿ ಶ್ರೀ ಚಂದ್ರಲಾಪರಮೇಶ್ಮರಿಯ ದಿವ್ಯ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಮನ್ಮಪ ಶಾಲಿವಾಹನ ಶಖೆ 1944 ಶುಭಕೃನ್ನಾಮ ಸಂವತ್ತರ ಚೈತ್ರ ಶುಕ್ಲ ಪೌರ್ಣಿಮ ದಿನಾಂಕ 16.04.2022 ಶನಿವಾರದಿಂದ ದಿನಾಂಕ 24.04.2022 ಚೈತ್ರ ಬಹುಳ ಅಷ್ಮಮಿವರೆಗೆ ಶ್ರೀ ಚಂದ್ರಲಾಪರಮೇಶ್ವರಿ ಮಹೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಯುತವಾಗಿ ಆಚರಿಸಲು ದೇವಸ್ಥಾನ ಸಮಿತಿ ನಿಶ್ಚಯಿಸಿದೆ.
ಕಳೆದ ಎರಡು ವರ್ಷ ಮಹಾಮಾರಿ ಕೋವಿಡ್-19 ರ ತೊಂದರಗಳಿAದಾಗಿ ಶ್ರೀ ಮಾತೆಯ ಉತ್ಸವವು ಯಾವುದೇ ವಿಶೇಷಗಳಿಂದ ಕೂಡಿರದ ಬಹು ನೀರಸವಾಗಿ ಭಕ್ತರ ಅನುಪಸ್ಥಿತಿಯಲ್ಲಿ ನೆರವೇರಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು.
ದಿನಾoಕ 31,03.2022 ರಂದು ಸರಕಾರ ತನ್ನ ಪ್ರಕಟಣೆಯಲ್ಲಿ ಕೋವಿಡ್, ನಿಯಮಾವಳಿಗಳನ್ನು ತೆರವುಗೊಳಿಸಿದ್ದಿಂದ ಈ ಕಳಗಿನಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರಣ ಸದ್ಭಕ್ತರು ಆಗಮಿಸಿ ಉತ್ಸವದಲ್ಲಿ ಭಾಗವಹಿಸಿ ತನು, ಮನ, ಧನದಿಂದ ಸೇವೆ ಸಲ್ಲಿಸಿ ಶ್ರೀ ಚಂದ್ರಲಾಪರಮೇಶ್ವರಿ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಮಂಡಳಿ ಪ್ರಾರ್ಥಿಸಿದೆ.
ದಿನಾಂಕ 16-04-2022 ಶನಿವಾರ ಪೌರ್ಣಿಮೆಯಂದು ಬೆಳಿಗ್ಗೆ 5 ರಿಂದ 6ರ ವರೆಗೆ ಕಾಕಡಾರತಿ ಮತ್ತು ಉಷಃಕಾಲ ಪೂಜೆ. ಮುಂಜಾನೆ 9 ರಿಂದ 11- ಪಂಚಾಮೃತ ಅಭಿಷೇP.À 11 ರಿಂದ 12ರ ವರೆಗೆ ಪ್ರವಚನ, ಮಧ್ಯಾಹ್ನ 12 ರಿಂದ 2.00ರ ವರೆಗೆ ಅಲಂಕಾರ. ಮಧ್ಯಾಹ್ನ 2 ರಿಂದ 3ರ ವರೆಗೆ ಅರ್ಚನೆ, ಉಡಿ ತುಂಬು ಕಾರ್ಯಕ್ರಮ. ಮಧ್ಯಾಹ್ನ 3 ರಿಂದ 5 – ಮಹಾ ನೈವೇದ್ಯ, ತೀರ್ಥ,ಪ್ರಸಾದ. ರಾತ್ರಿ 6 ರಿಂದ 10 – ಪಲ್ಲಕ್ಕಿ ಸೇವೆ, ಮಂತ್ರಪುಷ್ಪ.
ದಿನಾoಕ 17-04-2022 ರವಿವಾರ ಪ್ರತಿಪದೆಯಂದು ರಾತ್ರಿ 6 ರಿಂದ 10- ಮಯೂರ ವಾಹನ ಸೇವೆ, ಮಂತ್ರಪುಷ್ಪ. ದಿನಾಂಕ 18-04-2022 ಸೋಮವಾರದಂದು ರಾತ್ರಿ 6 ರಿಂದ 10- ಗಜವಾಹನ ಸೇವೆ, ಮಂತ್ರಪುಷ್ಪ.
ದಿನಾoಕ 19.4.2022ರಂದು ರಾತ್ರಿ 8 ರಿಂದ 10ರ ವರೆಗೆ ಅಶ್ವವಾಹನ ಮತ್ತು ಮಂತ್ರ ಪುಷ್ಟ ದಿನಾಂಕ 20-04-2022 ಬುಧವಾರ ಚತುರ್ಥಿಯಂದು ರಾತ್ರಿ, 6 ರಿಂದ 10ರ ವರೆಗೆ ದೀಪೋತ್ಸವ, ಗರುಡವಾಹನ, ಮಂತ್ರಪುಷ್ಪ.
21-04-2022 ಗುರುವಾರ ಪಂಚಮಿಯoದು ಸಾಯಂಕಾಲ 5 ರಿಂದ 6.00ರ ವರೆಗೆ ರಥೋತ್ಸವ, ರಾತ್ರಿ 7 ರಿಂದ 9- ಮಹಾ ನೈವೇದ್ಯ, ಮಹಾಪ್ರಸಾದ 22-04-2022 ಶುಕ್ರವಾರ ಷಷ್ಠಿ; ಬೆಳಿಗ್ಗೆ 7ರಿ0ದ 9-ಗೋಪಾಳ ಕಾವಲ, ಅವಭ್ಛತ ಸ್ನಾನ, ಮಧ್ಯಾಹ್ನ 3 ರಿಂದ 5- ಮಹಾ ನೈವೇದ್ಯ ಮಹಾಪ್ರಸಾದ. ರಾತ್ರಿ 9 ರಿಂದ 10-ಪಲ್ಲಕ್ಕಿ ಸೇವೆ.
23-04-2022 ಶನಿವಾರ ಸಪ್ತಮಿ: ಬೆಳಿಗ್ಗೆ 11 ರಿ0ದ 12-ಶ್ರೀ ಸತ್ಯನಾರಾಯಣ ಪೂಜಿ. ಮಧ್ಯಾಹ್ನ 3ರಿ0ದ 5- ಮಹಾ ನೈವೇದ್ಯ,ಮಹಾಪ್ರಸಾದ ರಾತ್ರಿ 9 ರಿಂದ 10-ಪಲ್ಲಕ್ಕಿ ಸೇವೆ.
ದಿನಾಂಕ 24.4.2022ರಂದು ಬೆಳಿಗ್ಗೆ 11 ರಿಂದ 12ರ ವರೆಗೆ ಕುಮಾರಿಕೆ ಪೂಜೆ, ಮಧ್ಯಾಹ್ನ 3 ರಿಂದ 5ರ ವರೆಗೆ ನೈವಿದ್ಯ, ಮಹಾಪ್ರಸಾದ, ರಾತ್ರಿ 9 ರಿಂದ 10ರ ವರೆಗೆ ಪಲ್ಲಕ್ಕಿ ಸೇವೆ.
ಪ್ರತಿಪದೆಯಿಂದ ಸಪ್ತಮಿವರೆಗೆ ಬೆಳಿಗ್ಗೆ 11 ರಿಂದ 1 ಗಂಟೆವರೆಗೆ ಫಲಾಹಾರ ವ್ಯವಸ್ಥೆ ಇದ್ದು, ವಿಶೇಷ ಸಂಗೀತ, ಕೀರ್ತನೆ, ಪ್ರವಚನಗಳ ಸಮಯವನ್ನು ಅಂದೇ ಪ್ರಕಟಿಸಲಾಗುವುದು ಎಂದು ಶ್ರೀ ಕ್ಷೇತ್ರ ಸನ್ನತಿಯ ಶ್ರೀ ಚಂದ್ರಲಾAಬಾ ಸೇವಾ ಸಂಘದ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Home Featured Kalaburagi ಏಪ್ರಿಲ್ 16 ರಿಂದ 24ರ ವರೆಗೆ ಶ್ರೀ ಕ್ಷೇತ್ರ ಸನ್ನತಿಯಲ್ಲಿ ಶ್ರೀ ಚಂದ್ರಲಾoಬಾ ದೇವಿಯ ಉತ್ಸವ...