ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಮಾರ್ಚ್ 27 ರಿಂದ ನಾಲ್ಕು ದಿನಗಳ “ನಾಟಕೋತ್ಸವ” : ಜೋಷಿ

0
760

ಕಲಬುರಗಿ,ಮಾ.24:ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಕಲಬುರಗಿ ರಂಗಾಯಣವು ಮಾರ್ಚ್ 27 ರಿಂದ 30ರ ವರೆಗೆ “4 ದಿನಗಳ ನಾಟಕೋತ್ಸವ” ಆಯೋಜಿಸಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಷಿ, ಹೇಳಿದರು.
ಗುರುವಾರ ಕಲಬುರಗಿ ರಂಗಾಯಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಲಬುರಗಿ ನಗರದ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ಈ ನಾಟಕೋತ್ಸವ ನಡೆಯಲಿದ್ದು, ಪ್ರತಿ ದಿನ ಸಾಯಂಕಾಲ 7 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ ಎಂದರು.
ಮಾರ್ಚ್ 27ಕ್ಕೆ ವಿಶ್ವರಾಜ ಪಾಟೀಲ ನಿರ್ದೇಶನದ “ತ್ರಯಸ್ಥ”, ಮಾರ್ಚ್ 28ಕ್ಕೆ ಮಹಾದೇವ ಹಡಪದ ನಿರ್ದೇಶನದ “ಸಿರಿ ಪುರಂದರ”, ಮಾರ್ಚ್ 29ಕ್ಕೆ ಪ್ರಭುಲಿಂಗ ಜಿ. ನೀಲೂರೆ ಅವರ ರಚನೆಯ “ಹುಕುಂ ಪತ್ರ” ಹಾಗೂ ಮಾರ್ಚ್ 30ಕ್ಕೆ ವೆಂಕಟೇಶ ಮಾಸ್ತರ ಯಾಪಲದಿನ್ನಿ ಅವರ ನಿರ್ದೇಶನದ “ರಾಮ-ರಾವಣರ ಯುದ್ಧ” ಬಯಲಾಟ ಪ್ರದರ್ಶನಗೊಳಲ್ಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕ ವೀಕ್ಷಿಸಬೇಕೆಂದು ಪ್ರಭಾಕರ ಜೋಷಿ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಕಲಬುರಗಿ ರಂಗಾಯಣದ ಆಡಳಿತಾಧಿಕಾರಿ ಜಗದೀಶ್ವರಿ ಅ. ನಾಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ, ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಇದ್ದರು.

LEAVE A REPLY

Please enter your comment!
Please enter your name here